Wednesday, September 23, 2026
Homeವರಂಗ ಗ್ರಾಮ ಪಂಚಾಯತ್‌ನಾರಾಯಣ ಗುರುಗಳ ಜೀವನ ಮತ್ತು ತತ್ವಾದರ್ಶಗಳು ಭಾರತೀಯ ಸಮಾಜಕ್ಕೆ ದಿಕ್ಸೂಚಿ. ರಾಜ್ಯ ಮಟ್ಟದ ಭಾಷಣ ಸ್ಪರ್ಧೆ:...

ನಾರಾಯಣ ಗುರುಗಳ ಜೀವನ ಮತ್ತು ತತ್ವಾದರ್ಶಗಳು ಭಾರತೀಯ ಸಮಾಜಕ್ಕೆ ದಿಕ್ಸೂಚಿ. ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ಸಂಜನಾ ಮಾತಿಬೆಟ್ಟು ಪ್ರಥಮ ಸ್ಥಾನ.

ಮುನಿಯಾಲು : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಪ್ರಯುಕ್ತ ಬಿಲ್ಲವರ ಸೇವಾ ಸಂಘ (ರಿ.) ಬನ್ನಂಜೆ ಉಡುಪಿಯಲ್ಲಿ ನಾರಾಯಣ ಗುರುಗಳ ಜೀವನ ಮತ್ತು ತತ್ವಾದರ್ಶಗಳು ಭಾರತೀಯ ಸಮಾಜಕ್ಕೆ ದಿಕ್ಸೂಚಿ ಎಂಬ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಎಂ ಎಸ್ ಸಿ ವಿದ್ಯಾರ್ಥಿನಿ ಸಂಜನಾ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಫಲಕ ಮತ್ತು ರೂಪಾಯಿ ಹದಿನೈದು ಸಾವಿರ ನಗದು ಬಹುಮಾನವನ್ನು ಪಡೆದಿರುತ್ತಾರೆ.

ಅವರು ಮಾತಿಬೆಟ್ಟು ಅಶೋಕ ನಿವಾಸ ಚಿತ್ರ ಮತ್ತು ಉದಯ್ ಪೂಜಾರಿ ಪುತ್ರಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!