Thursday, September 24, 2026
Homeಹೆಬ್ರಿಹೆಬ್ರಿ ತಾಲ್ಲೂಕು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್; ಬಲ್ಲಾಡಿ ವಲಯದಲ್ಲಿ...

ಹೆಬ್ರಿ ತಾಲ್ಲೂಕು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್; ಬಲ್ಲಾಡಿ ವಲಯದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ.

ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲ್ಲೂಕು ಮುದ್ರಾಡಿಯ ಬಲ್ಲಾಡಿ ವಲಯದ ವತಿಯಿಂದ ಬಲ್ಲಾಡಿಯ ಮುದ್ದು ಪೂಜಾರಿ ಅವರ ಕೃಷಿ ಕ್ಷೇತ್ರದಲ್ಲಿ ಹವಾಮಾನ ಆಧಾರಿತ ಕೃಷಿ ಪದ್ಧತಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ಬುಧವಾರ ಜರುಗಿತು.

ಶ್ರೀಕಾಂತ ಆಚಾರ್ಯ ಎಲಿಕೋಡು ಅವರು ಬದಲಾದ ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವ ಕೃಷಿ ಪದ್ಧತಿ, ಗಿಡಗಳ ನಿರ್ವಹಣೆ ಹಾಗೂ ನೀರಿನ ಸಮರ್ಥ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ರೈತರು ಅನುಸರಿಸಬೇಕಾದ ಆಧುನಿಕ ತಂತ್ರಜ್ಞಾನ ಮತ್ತು ಸಾವಯವ ಕೃಷಿಯ ಮಹತ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುದ್ದು ಪೂಜಾರಿ ವಹಿಸಿದ್ದರು.

ಯೋಜನೆಯ ವಲಯ ಅಧ್ಯಕ್ಷ ಯೋಗೀಶ್, ಅರ್ಧನಾರೀಶ್ವರ ಭಜನಾ ಸಂಘದ ಅಧ್ಯಕ್ಷ ವಸಂತ ಕುಲಾಲ್, ಮುದ್ರಾಡಿ ಗ್ರಾಮ ಪಂಚಾಯತಿ ನಿಕಟಪೂರ್ವ ಅಧ್ಯಕ್ಷೆ ವಸಂತಿ ಪೂಜಾರಿ, ವಲಯದ ಕೆಲಸ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಪ್ರಮುಖರಾದ ಕರುಣಾಕರ ಶೆಟ್ಟಿ, ಸುಂದರ ಪೂಜಾರಿ, ಹೇಮಾವತಿ, ಭಾರತಿ, ಶ್ರೀಧರ ಕುಲಾಲ್, ಸುಧಾಕರ ಕುಲಾಲ್, ಉದಯ ಕುಲಾಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಸುಂದರ ಪೂಜಾರಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಕೃಷಿಕರು, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ಕೃಷಿ ಮೇಲ್ವಿಚಾರಕ ಉಮೇಶ್‌ ಬಿಕೆ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!