ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘ ಇದರ ಅಧ್ಯಕ್ಷರಾಗಿ ಮುದ್ರಾಡಿ ಮಂಜುನಾಥ ಪೂಜಾರಿ ಆಯ್ಕೆ.
ಮುದ್ರಾಡಿ : ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಂಘದ ಸ್ಥಾಪಕರಾದ ರಾಜ್ಯದ ನಾರಾಯಣ ಗುರು ಅಭಿವೃದಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಅವಿರೋಧವಾಗಿ ಮುಂದಿನ 5 ವರ್ಷಕ್ಕೆ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಸತೀಶ್ ಸೇರಿಗಾರ್ ಚುನಾಯಿತರಾದರು. ನಿರ್ದೇಶಕರಾಗಿ ರವಿ ಶೆಟ್ಟಿಗಾರ್ ಮುದ್ರಾಡಿ, ಶಿವಪ್ರಸಾದ್ ಪೂಜಾರಿ ಮುದ್ರಾಡಿ, ದಿನೇಶ ಕುಲಾಲ್ ಬೇಳಂಜೆ, ಆದರ್ಶ ಎಂ ಮುದ್ರಾಡಿ, ಸುರೇಶ್ ಶೆಟ್ಟಿಗಾರ್ ಉಪ್ಪಳ, ರತ್ನಾಕರ ಪೂಜಾರಿ ಮುದ್ರಾಡಿ, ಚಿತ್ರಾ ಮುನಿಯಾಲು, ಸುಮಲತಾ, ಬಾಬಿ ಉಜೂರು, ಕೃಷ್ಣ ನಾಯ್ಕ್ ಕಿನ್ನಿಗುಡ್ಡೆ ಆಯ್ಕೆಯಾಗಿದ್ದಾರೆ. ಸಹಕಾರಿ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ. ಎಂ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಪ್ರಭಾರ ವ್ಯವಸ್ಥಾಪಕ ಎಚ್. ನಾರಾಯಣ ಪೂಜಾರಿ ಮತ್ತು ಸಿಬಂದ್ಧಿಗಳು ಸಹಕರಿಸಿದರು.



