Sunday, October 18, 2026
Homeಶಿವಪುರ ಗ್ರಾಮ ಪಂಚಾಯತ್‌ಸೂರಿಮಣ್ಣು ಸುಚಿತ್ರಾ ನಾಯ್ಕ್‌ ಅವರಿಗೆ ಭಜನೆಯ ಮೂಲಕ ಶ್ರದ್ಧಾಂಜಲಿ: ಹಲವು ಗಣ್ಯರಿಂದ ನುಡಿನಮನ.

ಸೂರಿಮಣ್ಣು ಸುಚಿತ್ರಾ ನಾಯ್ಕ್‌ ಅವರಿಗೆ ಭಜನೆಯ ಮೂಲಕ ಶ್ರದ್ಧಾಂಜಲಿ: ಹಲವು ಗಣ್ಯರಿಂದ ನುಡಿನಮನ.

ಸುಚಿತ್ರಾ ನಾಯ್ಕ್‌ ಧೀಮಂತ ಮಹಿಳೆ: ರವಿರಾಜ್‌ ಉಪಾಧ್ಯಾಯ.

ಸೂರಿಮಣ್ಣು ( ಶಿವಪುರ ) ಆತ್ಮಕ್ಕೆ ಸಾವಿಲ್ಲ, ಸುಚಿತ್ರಾ ನಾಯ್ಕ್‌ ಶರೀರ ಬಿಟ್ಟು ಹೋಗಿದ್ದಾರೆ, ನಮ್ಮ ನಡುವೆಯೇ ಇದ್ದಾರೆ. ಅವರು ಧೀಮಂತ ಮಹಿಳೆ ಎಂದು ಸೂರಿಮಣ್ಣು ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರವಿರಾಜ್‌ ಉಪಾಧ್ಯಾಯ ಹೇಳಿದರು. ಅವರು ಭಾನುವಾರ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಸುಚಿತ್ರಾ ನಾಯ್ಕ್‌ ಅವರಿಗೆ ಸೂರಿಮಣ್ಣು ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಭಜನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.

ಸೂರಿಮಣ್ಣು ಮಠದಲ್ಲಿ ನಿರಂತರವಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಮನೆಮಾತಾದವರು ಸುಚಿತ್ರಾ ನಾಯ್ಕ್‌ ಎಂದು ರವಿರಾಜ್‌ ಉಪಾಧ್ಯಾಯ ಸ್ಮರಿಸಿದರು. ಸುಚಿತ್ರಾ ನಾಯ್ಕ್‌ ಅವರನ್ನು ಕಳೆದುಕೊಂಡು ಸೂರಿಮಣ್ಣು ಪರಿಸರ ಮೌನವಾಗಿದೆ. ಆದರ್ಶ ವ್ಯಕ್ತಿತ್ವದ ಸುಚಿತ್ರಾ ಅವರು ಅಂದು ಎಲ್ಲರನ್ನೂ ಒಗ್ಗೂಡಿಸಿ ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿಯನ್ನು ಸ್ಥಾಪಿಸಲು ಕಾರಣರಾಗಿದ್ದಾರೆ. ಅನಾರೋಗ್ಯದ ನೋವು ಇದ್ದರೂ ನುಂಗಿಕೊಂಡು ಸಾರ್ವಜನಿಕವಾಗಿ ನಗುಮುಖದಿಂದ ಇದ್ದದ್ದು ಕಂಡಾಗ ಅವರ ಗಟ್ಟಿ ಮನಸ್ಸು ಅರ್ಥವಾಗುತ್ತದೆ ಎಂದು ಸೂರಿಮಣ್ಣು ಮಠದ ಮುಖ್ಯಸ್ಥ ಸದಾಶಿವಾ ಉಪಾಧ್ಯಾಯ ಸ್ಮರಿಸಿದರು.
ಸುಚಿತ್ರಾ ನಾಯ್ಕ್‌ ಅಭಿಮಾನಿ ಬಳಗದ ವತಿಯಿಂದ ನಡೆದ ಭಜನೆಯ ಮೂಲಕ ಶ್ರದ್ಧಾಂಜಲಿ ಸಭೆಯಲ್ಲಿ ವಿವಿಧ ಭಜನಾ ಮಂಡಳಿಗಳು ಭಜನೆ ನಡೆಸಿದರು.

ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಶಿವಪುರದ ಮುಖಂಡ ಸುರೇಶ ಶೆಟ್ಟಿ ಹುಣ್ಸೆದಡಿ, ಮುನಿಯಾಲು ಗೋಪಿನಾಥ ಭಟ್‌, ಗಗನ್‌ ಶೆಟ್ಟಿ ಸೂರಿಮಣ್ಣು, ಮುಟ್ಲುಪಾಡಿ ಸತೀಶ್‌ ಶೆಟ್ಟಿ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು. ವಿವಿಧ ಭಜನಾ ಮಂಡಳಿಯ ಸದಸ್ಯರು, ಪ್ರಮುಖರು, ಸ್ಥಳೀಯರು, ಸುಚಿತ್ರಾ ನಾಯ್ಕ್‌ ಸಹೋದರ ಸುಭಾಶ್ಚಂದ್ರ ನಾಯ್ಕ್‌, ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!