Monday, October 19, 2026
Homeಹೆಬ್ರಿಮುಳ್ಕಾಡು : ಗಾಂಧಿ ಜಯಂತಿ ವಿಶೇಷ ಕಾರ್ಯಕ್ರಮ ಸನ್ಮಾನ ಹಾಗೂ ಅಭಿವೃದ್ಧಿಯ ಕೈಪಿಡಿ ಬಿಡುಗಡೆ

ಮುಳ್ಕಾಡು : ಗಾಂಧಿ ಜಯಂತಿ ವಿಶೇಷ ಕಾರ್ಯಕ್ರಮ ಸನ್ಮಾನ ಹಾಗೂ ಅಭಿವೃದ್ಧಿಯ ಕೈಪಿಡಿ ಬಿಡುಗಡೆ

ಮುಳ್ಕಾಡು ( ಎಳ್ಳಾರೆ ) : ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳ್ಳಾರೆ ಮುಳ್ಕಾಡಿನಲ್ಲಿ ಶುಕ್ರವಾರ ಗಾಂಧಿ ಜಯಂತಿ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಕಾಂತಪ್ಪ ಪೂಜಾರಿ ಅವರ ನಿವಾಸದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.

ಎಳ್ಳಾರೆ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸುವುದರೊಂದಿಗೆ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಯ ಕುರಿತ ಕೈಪಿಡಿಯನ್ನು ಶಾಸಕ ಸುನೀಲ್‌ ಕುಮಾರ್‌ ಬಿಡುಗಡೆ ಮಾಡಿದರು.

ಮುಳ್ಕಾಡು ಗದ್ದಿಗೆ ಮಾರಿಯಮ್ಮ ದೇವಸ್ಥಾನದ ಬಳಿ 50ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್‌ ರಸ್ತೆಯ ಉದ್ಘಾಟನೆಯನ್ನು ಶಾಸಕ ಸುನೀಲ್‌ ಕುಮಾರ್‌ ನೆರವೇರಿಸಿದರು. ಬಳಿಕ ಗದ್ದಿಗೆ ಮಾರಿಯಮ್ಮ ದೇವಸ್ಥಾನದಲ್ಲಿ ಹೂವಿನಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಮುಳ್ಕಾಡು ಬೈಲು ಪಾಸಿಂಗ್ ಗದ್ದಿಗೆ ಮಾರಿಯಮ್ಮ ದೇವಸ್ಥಾನ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಸ್ಥಳದಾನ ಮಾಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಬೇಬಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿ ಹಲವು ಅಭಿವೃದ್ಧಿಗೆ ಮುನ್ನಡೆ ನೀಡಿದ ಸತೀಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಗ್ರಾಮದ ಅಭಿವೃದ್ಧಿಯಲ್ಲಿ ಸತೀಶ್‌ ಪೂಜಾರಿ ಅವರ ಪ್ರಯತ್ನ ಮತ್ತು ಸಹಕಾರವನ್ನು ಶ್ಲಾಘಿಸಿದರು.

ನಿವೃತ್ತ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಕುಮಾರಿ ಸಿಯಾ ಪ್ರಾರ್ಥನೆಯನ್ನು ನೆರವೇರಿಸಿದರು. ರಕ್ಷಿತ ಸುವರ್ಣ ಸ್ವಾಗತಿಸಿದರು. ರೂಪಶ್ರೀ ಕೋಟಿಬೆಟ್ಟು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!