ದೈವಾರಾಧಕರ ಬದುಕಿನ ಏಳಿಗಾಗಿ ಒಕ್ಕೂಟ ಶ್ರಮಿಸಲಿದೆ : ಸುಕುಮಾರ್ ಪೂಜಾರಿ ಮುದ್ರಾಡಿ.
ಹೆಬ್ರಿ : ದೈವರಾಧಕರ ಬದುಕಿನ ಏಳಿಗೆಗಾಗಿ ಒಕ್ಕೂಟವನ್ನು ಸ್ಥಾಪಿಸಿದ್ದೇವೆ. ಎಲ್ಲರೂ ಸೇರಿ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಿ ಮುನ್ನಡೆಸಬೇಕು, ಕಟ್ಟದಲ್ಲಿದ್ದವರಿಗೆ ಒಕ್ಕೂಟ ಈ ತನಕ ನೆರವನ್ನು ನೀಡಿ ಸಹಾಯ ಮಾಡಿದೆ. ತುಳುನಾಡಿನಲ್ಲಿ ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟವು ಮಾದರಿ ಸಂಘಟನೆಯಾಗಿ ಬೆಳೆಯಬೇಕು, ಅದಕ್ಕಾಗಿ ದೈವಾರಾಧಕರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟದ ಸಂಸ್ಥಾಪಕರಾದ ಗೌರವಾಧ್ಯಕ್ಷ ಮುದ್ರಾಡಿ ಸುಕುಮಾರ್ ಬಿ ಪೂಜಾರಿ ಹೇಳಿದರು.

ಅವರು ಹೆಬ್ರಿಯ ಶ್ರೀ ಅರ್ಧನಾರೀಶ್ವರ ಸನ್ನಿಧಿ ಸಭಾಭವನದಲ್ಲಿ ಸೋಮವಾರ ನಡೆದ ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನೂತನ ಅಧ್ಯಕ್ಷರಾಗಿ ಪದಪ್ರಧಾನ ಸ್ವೀಕರಿಸಿದ ಅರುಣ್ ಪೂಜಾರಿ ಕೆರ್ಜಾಡಿ ಮಡಾಮಕ್ಕಿ ಮಾತನಾಡಿ ದೈವಾರಾಧಕರ ಒಕ್ಕೂಟದ ಸದಸ್ಯರ ಜೊತೆಗೆ ಸಂಘವು ನಿಲ್ಲುತ್ತದೆ. ಸಂಘದ ಉನ್ನತಿಗಾಗಿ ನೀವೆಲ್ಲರೂ ಸಹಕರಿಸಬೇಕು, ಸಂಘವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಯೋಜನೆ ಯೋಚನೆಯನ್ನು ಹೊಂದಿದ್ದೇವೆ. ಸದಸ್ಯವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರ ನೀಡಿ ಎಂದು ವಿನಂತಿಸಿದರು.

ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಪಾಣಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಸಂಘಕ್ಕಾಗಿ ಎಲ್ಲರೂ ಬೆಂಬಲಿಸಿ ಶ್ರಮಿಸಿ ಮುಂದೆ ಒಳ್ಳೇಯ ದಿನಗಳು ಬರಲಿವೆ ಎಂದರು.

ನೂತನ ಅಧ್ಯಕ್ಷ ಅರುಣ್ ಪೂಜಾರಿ ಕೆರ್ಜಾಡಿ ಮಡಾಮಕ್ಕಿ ಮತ್ತವರ ತಂಡಕ್ಕೆ ಪದಪ್ರದಾನ ನೆರವೇರಿಸಲಾಯಿತು.

ಹಿರಿಯ ದೈವಾರಾಧಕರಾದ ಆನಂದ ಶೆಟ್ಟಿ ಕುಚ್ಚೂರು ಮತ್ತು ಮುದ್ದು ಪೂಜಾರಿ ಸಂತೇಕಟ್ಟೆ ಅವರನ್ನು ಗೌರವಿಸಲಾಯಿತು. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರವೀಣ್ ಪಾಣಾರ, ಕಾರ್ಯದರ್ಶಿ ಸಂತೋಷ ಪೂಜಾರಿ ಹಾಗೂ ಕೊಶಾಧಿಕಾರಿ ರಾಘವೇಂದ್ರ ಪಾಣಾರ ಅವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಹಿರಿಯರಾದ ಮುದ್ದು ಪಾಣಾರ, ನೂತನ ಅಧ್ಯಕ್ಷ ಅರುಣ್ ಪೂಜಾರಿ ಕೆರ್ಜಾಡಿ, ಕಾರ್ಯದರ್ಶಿ ನವೀನ್ ಪೂಜಾರಿ, ಕೋಶಾಧಿಕಾರಿ ಸುಧಾಕರ ಪರವ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂತೋಷ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಸಚಿನ್ ಪೆರ್ಡೂರು ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಸೌಮ್ಯ ಪ್ರಾರ್ಥಿಸಿದರು.




