ಭತ್ತದ ಗದ್ದೆ, ಅಡಿಕೆ ತೆಂಗು ತೋಟ ಕಂಡು ಸಂತಸ ಗೊಂಡ ಸಚಿವರು.
ತೋಟದಲ್ಲೇ ಬೊಂಡ ಕುಡಿದ ಸಚಿವ ರಿಜ್ವಾನ್ ಅರ್ಹದ್ !
ಉಡುಪಿ ಜಿಲ್ಲೆಯಲ್ಲಿ ಕೃಷಿ ಕಂಡು ಖುಷಿ ಪಟ್ಟ ಸಚಿವರು !
ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿಯಿದೆ : ಸಚಿವ ರಿಜ್ವಾನ್ ಅರ್ಹದ್
ಹೆಬ್ರಿ ( ಕರ್ಜೆ ) : ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಭಾನುವಾರ ಸಮಾಜಸೇವಕರಾದ ಹುಬ್ಬಳ್ಳಿ ಧಾರವಾಡದ ಉದ್ಯಮಿ ಧಾರ್ಮಿಕ ಮುಖಂಡರಾದ ಸುಗ್ಗಿ ಸುಧಾಕರ ಶೆಟ್ಟಿಯವರ ಕೃಷಿಕ್ಷೇತ್ರವನ್ನು ವೀಕ್ಷಣೆ ಮಾಡಿದರು.

ಭಾನುವಾರ ಮಧ್ಯಾಹ್ನ ಕರ್ಜೆ ಸಮೀಪದ ಹಲುವಳ್ಳಿಯಲ್ಲಿರುವ ಸುಗ್ಗಿ ಸುಧಾಕರ ಶೆಟ್ಟಿಯವರ ಮೂಲ ಮನೆಗೆ ಆಗಮಿಸಿದ ಸಚಿವರು ಮನೆಯವರೊಂದಿಗೆ ಮಾತನಾಡಿ ಗೌರವ ಸ್ವೀಕರಿಸಿದರು. ಸುಗ್ಗಿ ಸುಧಾಕರ ಶೆಟ್ಟಿಯವರ ಗೌವರ ಮತ್ತು ಆತಿಥ್ಯ ಸ್ವೀಕರಿದರು. ಮನೆಯಲ್ಲಿ ಸೇರಿದ್ದ ಸುಗ್ಗಿ ಸುಧಾಕರ ಶೆಟ್ಟಿಯವರ ಅಭಿಮಾನಿಗಳು, ಗ್ರಾಮಸ್ಥರು, ಸ್ಥಳೀಯ ಗಣ್ಯರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರೊಂದಿಗೆ ಮಾತುಕತೆ ನಡೆಸಿದರು.

*ಭತ್ತದ ಗದ್ದೆ ಕಂಡು ಖುಷಿ ಪಟ್ಟ ಆಹಾರ ಸಚಿವರು !
ಸುಗ್ಗಿ ಸುಧಾಕರ ಶೆಟ್ಟಿಯವರ ಮನೆಯ ಮುಂಭಾಗದಲ್ಲಿದ್ದ ಭತ್ತದ ಗದ್ದೆಯನ್ನು ಕಂಡು ಗದ್ದೆಗೆ ತೆರಳಿದ ಸಚಿವರು ಸಾಂಪ್ರದಾಯಿಕ ಕೃಷಿಯನ್ನು ನೋಡಿ ಖುಷಿಪಟ್ಟರು. ಸಾಂಪ್ರದಾಯಿಕ ಕೃಷಿಯ ಬಗ್ಗೆ ಸಚಿವರಿಗೆ ಸುಧಾಕರ ಶೆಟ್ಟಿಯವರ ವಿವರಿಸಿದರು.

ಗದ್ದೆ ಹದ ಮಾಡುವುದು, ಗದ್ದೆ ನಾಟಿ, ಫಸಲು, ಕೊಯ್ಲು, ನೀರಿನ ವ್ಯವಸ್ಥೆ, ಭತ್ತದ ಬೇಸಾಯದಿಂದ ಅಂತರ್ಜಲ ವೃದ್ಧಿಯ ಬಗೆಗೆ ಕುತೂಹಲದಿಂದ ಮಾಹಿತಿ ಪಡೆದರು.

ಬಳಿಕ ಅಡಿಕೆ ತೆಂಗಿನ ತೋಟಕ್ಕೆ ತೆರಳಿ ಕೈಗೆಟಕುತ್ತಿದ್ದ ಹಣ್ಣು ಅಡಿಕೆ, ಕಾಯಿ ಅಡಿಕೆಯನ್ನು ಕೊಯ್ದು ಮಾಹಿತಿ ಪಡೆದರು. ಬೊಂಡವನ್ನು ಸುಗ್ಗಿ ಸುಧಾಕರ ಶೆಟ್ಟಿಯವರ ಸಾಂಪ್ರದಾಯಿಕ ತೋಟದ ಬೊಂಡವನ್ನು ತೋಟದಲ್ಲೇ ಕುಡಿದು ಅತ್ಯಂತ ಖುಷಿಪಟ್ಟರು.

ಅಡಿಕೆಯನ್ನು ಒಣಗಿಸುವ ಬಗೆಗಿನ ವ್ಯವಸ್ಥೆಯ ಮಾಹಿತಿಯನ್ನು ಸ್ಥಳಕ್ಕೆ ಹೋಗಿ ಪಡೆದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಕಾಂಗ್ರೆಸ್ ಯುವ ಮುಖಂಡ ರವಿಶಂಕರ್ ಸೇರಿಗಾರ್ ಕಾರ್ಕಳ, ಪ್ರಗತಿಪರ ಕೃಷಿಕ ಚಾರ ಮಿಥುನ್ ಶೆಟ್ಟಿ ಹೆಬ್ರಿ, ವಿವಿಧ ಪ್ರಮುಖರು, ಗಣ್ಯರು, ಸ್ಥಳೀಯರು ಭಾಗವಹಿಸಿದ್ದರು.

ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿಯಿದೆ : ಸಚಿವ ರಿಜ್ವಾನ್ ಅರ್ಹದ್

ಈ ಸಲ ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿಯಿದೆ. ಇದರಿಂದ ರೈತರಿಗೆ ಸಾಕಾಷ್ಟು ಸಮಸ್ಯೆ ಆಗುತ್ತಿದೆ. ಆಹಾರ ಉತ್ಪಾದನೆಗೂ ಸಮಸ್ಯೆಯಾಗಬಹುದು ಎಂಬ ನಿರೀಕ್ಷೆಯಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ರೈತರ ಸಮಸ್ಯೆಯನ್ನು ಆಲಿಸಿ ಬರದ ಪರಿಸ್ಥಿತಿಯ ನಡುವೆಯೂ ರೈತರು ಹೇಗೆ ಕೆಲಸ ಮಾಡುತ್ತಾರೆ ಎಂದು ನೋಡಲು ಬಂದಿದ್ದೇನೆ. ಭತ್ತ ಬೇಸಾಯ, ಅಡಿಕೆ ತೆಂಗು ಕೃಷಿಯನ್ನು ವೀಕ್ಷಣೆ ಮಾಡಿದ್ದೇನೆ ಎಂದು ಸಚಿವ ರಿಜ್ವಾನ್ ಅರ್ಹದ್ ತಿಳಿಸಿದರು.






