71 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ : ನಾಟಿ ವೈಧ್ಯ ನರಸಿಂಹ ನಾಯ್ಕ್ ಚಾರ ಅವರಿಗೆ ಸನ್ಮಾನ.
ಹೆಬ್ರಿ : ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಭಾನುವಾರ ರಿಕ್ಷಾ ನಿಲ್ದಾಣದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ನಾಟಿ ವೈಧ್ಯ ನರಸಿಂಹ ನಾಯ್ಕ್ ಚಾರ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕುಚ್ಚೂರು ವಿಜಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್, ಹೆಬ್ರಿ ಠಾಣೆಯ ಸಬ್‌ಇನ್ಸ್‌ಫೆಕ್ಟರ್ ಲೋಹಿತ್ ಕುಮಾರ್, ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ಕಾನೂನು ಸಲಹೆಗಾರ ಭರತ್ ಕುಮಾರ್ ಶೆಟ್ಟಿ, ಮಾರ್ಗದರ್ಶಕ ಗಂಗಾಧರ ರಾವ್ ಹೆಬ್ರಿ, ಉದ್ಯಮಿ ಪರಶುರಾಮ್‌ಹೆಬ್ರಿ, ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಸ್ಥಳೀಯರು, ಪ್ರಮುಖರು, ಗಣ್ಯರು, ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು. ಕನ್ಯಾನ ಸಂತೋಷ ನಾಯಕ್ ಸ್ವಾಗತಿಸಿದರು. ಗೋಕುಲ ಆಚಾರ್ಯ ನಿರೂಪಿಸಿ ಸ್ವಾಗತಿಸಿದರು.



