Sunday, November 8, 2026
Homeನಾಡ್ಪಾಲು ಗ್ರಾಮ ಪಂಚಾಯತ್‌ರಾಷ್ಟ್ರೀಯ  ಪಂಚಾಯತ್ ಪುರಸ್ಕಾರ ಅಂತಿಮ ಅರ್ಹತಾ ಸುತ್ತಿಗೆ ನಾಡ್ಪಾಲು ಗ್ರಾಮ ಆಯ್ಕೆ - ಕೇಂದ್ರ ಅಧಿಕಾರಿಗಳ ...

ರಾಷ್ಟ್ರೀಯ  ಪಂಚಾಯತ್ ಪುರಸ್ಕಾರ ಅಂತಿಮ ಅರ್ಹತಾ ಸುತ್ತಿಗೆ ನಾಡ್ಪಾಲು ಗ್ರಾಮ ಆಯ್ಕೆ – ಕೇಂದ್ರ ಅಧಿಕಾರಿಗಳ  ಭೇಟಿ.  

 

ಹೆಬ್ರಿಯ ನಾಡ್ಪಾಲು ಗ್ರಾಮ ಪಂಚಾಯತಿಗೆ ಕೇಂದ್ರ ಪಂಚಾಯತ್ ಮಂತ್ರಾಲಯ ಅಧಿಕಾರಿ ತಂಡದ ಭೇಟಿ.

ನಾಡ್ಪಾಲು :  ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಬಡತನ ಮುಕ್ತ ವಿಭಾಗದಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿಗೆ ಪರಿಶೀಲನಾ ತಂಡದ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಕ್ಷೇತ್ರ ಪರಿಶೀಲನೆ ನಡೆಸಿದರು.

ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದ  Mr.Vikas Chhikara, Private Secretary , ಮತ್ತು  Mr. Sri K. Nageshwar Rao Consultant SoEPR, NIRD and PR .ಅವರನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ, ಸಿಬ್ಬಂಧಿ, ಸಂಜೀವಿನಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಸ್ವಾಗತಿಸಿದರು.

ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆ, ಸುಸ್ಥಿರ ಅಭಿವೃದ್ದಿ, ವಿವಿಧ ವಿನೂತನ ಪ್ರಯೋಗ, ಸಾರ್ವಜನಿಕ ಸಹಭಾಗಿತ್ವ, ಸಾಮಾಜಿಕ, ಆರ್ಥಿಕ ಸೌಲಭ್ಯಗಳ ಕುರಿತು, ಪಂಚಾಯತಿ ಅಭಿವೃದ್ದಿ ಅಧಿಕಾರಿ ಶೀತಲ್ ಪ್ರಸ್ತುತ ಪಡಿಸಿದರು.  ದಾಖಲೆ ಪರಿಶೀಲನೆ ಮತ್ತು ಕ್ಷೇತ್ರ ಭೇಟಿ ನೀಡಲಾಯಿತು .

ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತಿ ಎಸ್.ಡಿ.ಜಿ ಕೋಶದ ಅನಿಲ್ ಕುಮಾರ್ ಶೆಟ್ಟಿ, ನಾಡ್ಪಾಲು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಡಾ.ವಿದ್ಯಾಧರ ಹೆಗ್ಡೆ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಶೀತಲ್, ಹೆಬ್ರಿ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ದಿನೇಶ್ ಡಿ.ಇ. , ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸದಾಶಿವ ಸೇರ್ವೇಗಾರ್, ಕಾರ್ಯದರ್ಶಿ ಶೋಭಾವತಿ, ದೇವಕಿ, ಜಿಲ್ಲಾ ಪಂಚಾಯತ್ ಎಸ್.ಬಿ.ಎಮ್ Consultant ರಘುನಾಥ್, ಮಾಜಿ ಅಧ್ಯಕ್ಷರಾದ ದಿನೇಶ ಹೆಗ್ಡೆ, ನವೀನ್ ಕುಮಾರ್, ಮಾಜಿ ಉಪಾಧ್ಯಕ್ಷ ಜಗಧೀಶ ಹೇರಳೆ, ಮಾಜಿ ಸದಸ್ಯರುಗಳು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮಸ್ಥರು, ಸಂಜೀವಿನಿ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ANF, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!