Sunday, August 9, 2026
Homeಹೆಬ್ರಿಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪೆರ್ಡೂರು ಅನಂತ ಸ್ಪರ್ಶ ಲೀಜನ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ:...

ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪೆರ್ಡೂರು ಅನಂತ ಸ್ಪರ್ಶ ಲೀಜನ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ: ಡಾ. ಜಿಎಸ್ ಕೆ ಭಟ್ ಅವರಿಗೆ ಸನ್ಮಾನ

ಪೆರ್ಡೂರು : ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪೆರ್ಡೂರು ಅನಂತ ಸ್ಪರ್ಶ ಲೀಜನ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಯನ್ನು ಆಚರಿಸಲಾಯಿತು.ಸಮಾರಂಭದಲ್ಲಿ ಪೆರ್ಡೂರಿನ ಖ್ಯಾತ ಹಿರಿಯ ವೈದ್ಯರಾದ ಡಾ. ಜಿ ಎಸ್.ಕೆ.ಭಟ್. ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸೇವೆ ಗಳ ಮಹತ್ವ ಹಾಗೂ ವೈದ್ಯಕೀಯ ಕ್ಷೇತ್ರದ ಸವಾಲುಗಳ ಕುರಿತು ಮಾತನಾಡಿದರು.

ಸೀನಿಯರ್ ಛೇಂಬರ್ ಅಧ್ಯಕ್ಷ ಆನಂದ. ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ಪೆರ್ಡೂರು ಜೇಸಿಸ್ ಪೂರ್ವ ಜೇಸಿರೆಟ್ ವಿಭಾಗದ ಅಧ್ಯಕ್ಷೆ ಮನೋರಮಾ ಭಟ್, ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ ಐತಾಳ್, ಸ್ಥಾಪಕಾಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ಕಾರ್ಯದರ್ಶಿ ಸತೀಶ್ ಎನ್ ಶೆಟ್ಟಿ, ಮತ್ತು ನಿರ್ದೇಶಕರಾದ ಸುರೇಶ್ ಕರ್ಕೆರ ಹಾಜರಿದ್ದರು. ಪುರುಷೋತ್ತಮ ಐತಾಳ್ ನಿರೂಪಿಸಿದರು ಸತೀಶ್ ಎನ್ ಶೆಟ್ಟಿ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments