ಕುಚ್ಚೂರು : ಸಹಕಾರಿಗಳಿಂದ ಗ್ರಾಮೀಣ ಭಾಗದ ಜನರ ಬದುಕು ಕಲ್ಯಾಣವಾಗುತ್ತದೆ. ಸಾಲ ಪಡೆಯುವುದರೊಂದಿಗೆ ಉತ್ತಮವಾಗಿ ಮರುಪಾವತಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಳ್ಳಿ ಪ್ರದೇಶದ ಶಾಂತಿನಿಕೇತನ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ಕುಚ್ಚೂರು ಗ್ರಾಮ ಪಂಚಾಯತಿ ನಿಕಟಪೂರ್ವ ಸದಸ್ಯೆ ಸುಜಾತ ಆರ್. ಶೆಟ್ಟಿ ಹೇಳಿದರು.
ಅವರು ಶಾಂತಿನಿಕೇತನದ ಸಂಸ್ಥಾಪನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ದೀಕ್ಷಿತ್ ನಾಯಕ್ ಮಾತನಾಡಿ, ನಮ್ಮ ಸಂಸ್ಥೆಗೆ ಸದಸ್ಯರು ನೀಡಿದ ಸಹಕಾರದಿಂದ ಇಲ್ಲಿಯತನಕ ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ. ಪ್ರತಿಯೊಬ್ಬ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಾಗ ಸಹಕಾರಿಯ ಬೆಳವಣಿಗೆ ಸಾಧ್ಯ ಎಂದರು.
ಸಿಇಒ ನರೇಂದ್ರ ಎಸ್. ಮರಸಣಿಗೆ, ನಿರ್ದೇಶಕರಾದ ಮಹೇಶ್, ಜಯಕರ್, ಪ್ರಸನ್ನ, ಸಿಬ್ಬಂದಿ ರಾಜೇಶ್ರೀ, ಪ್ರಮುಖರಾದ ರಘುರಾಮ್ ಶೆಟ್ಟಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.



