ಹೆಬ್ರಿ : ಹೆಬ್ರಿಯ ಬಚ್ಚಪ್ಪು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ವಿಶ್ವನಾಥ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಳೆದ 25 ವರ್ಷಗಳಿಂದ ನಿರಂತರವಾಗಿ ಸಂಘಕ್ಕೆ ಹಾಲು ಪೂರೈಸುತ್ತಾ ಬಂದಿರುವ ಸಂಘದ ಉಪಾಧ್ಯಕ್ಷ ವಿಜಯ ಶೆಟ್ಟಿ, ನಿರ್ದೇಶಕರಾದ ಪದ್ಮನಾಭ ಹೆಗ್ಡೆ, ದಿವಾಕರ ಹೆಗ್ಡೆ ಅವರ ಸಾರ್ಥಕ ಸೇವೆಯನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ನಿರ್ದೇಶಕರಾದ ಕರುಣಾಕರ ಹೆಗ್ಡೆ, ಸುಧೀರ್ ಜಿ. ಹೆಗ್ಡೆ, ಸತೀಶ್ ಹೆಗ್ಡೆ, ದಿನೇಶ ಶೆಟ್ಟಿಗಾರ್, ಶಾರದ, ಸುರೇಖಾ ಹೆಗ್ಡೆ, ಮೇಲ್ವಿಚಾರಕಿ ಅಶ್ವಿನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾವಿತ್ರಿ, ಸಹಾಯಕಿ ಜ್ಯೋತಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.




