ಕುಚ್ಚೂರು : ಕಾರ್ಕಳ ತಾಲ್ಲೂಕು ಮಟ್ಟದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಕುಚ್ಚೂರು ಹೆರ್ಗ ವಿಟ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ರೋಶಿತ್ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.

600ಮೀ ಪ್ರಥಮ, 400ಮೀ ಪ್ರಥಮ, 4-100ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬೆಳ್ವೆ ಗ್ರಾಮ ಪಂಚಾಯತಿಯ ಸಿಬ್ಬಂದಿಯಾದ ಹೆಬ್ರಿಯ ಬಂಗಾರಗುಡ್ಡೆಯ ರಾಜು ಮತ್ತು ಶೋಭ ದಂಪತಿಗಳ ಪುತ್ರನಾಗಿರುವ ರೋಶಿತ್ ದೈಹಿಕ ಶಿಕ್ಷಣ ಶಿಕ್ಷಕಿ ಕಮಲಿನಿಯವರಲ್ಲಿ ತರಬೇತಿಯನ್ನು ಪಡೆದಿದ್ದಾರೆ.



