Saturday, August 8, 2026
Homeಹೆಬ್ರಿಹೆಬ್ರಿ ಎಸ್.ಆರ್.ಪಬ್ಲಿಕ್ ಸ್ಕೂಲ್ ನಲ್ಲಿ “ಶೈನಿಂಗ್ ಬ್ರೈಟ್” ಕಾರ್ಯಕ್ರಮ.

ಹೆಬ್ರಿ ಎಸ್.ಆರ್.ಪಬ್ಲಿಕ್ ಸ್ಕೂಲ್ ನಲ್ಲಿ “ಶೈನಿಂಗ್ ಬ್ರೈಟ್” ಕಾರ್ಯಕ್ರಮ.

ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಅವರ ಪ್ರತಿಭೆಗೆ ಅವಕಾಶ ನೀಡಬೇಕು: ನಾಗರಾಜ ಶೆಟ್ಟಿ

ಹೆಬ್ರಿ : ಹೆಬ್ರಿ ಎಸ್ಆರ್ ಪಬ್ಲಿಕ್ ಸ್ಕೂಲ್ ನಲ್ಲಿ ಶುಕ್ರವಾರ ಶಾಲೆಯ ಎಸ್ಆರ್ ಸಭಾಂಗಣದಲ್ಲಿ “ಶೈನಿಂಗ್ ಬ್ರೈಟ್” ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಅವರವರ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಮುಂದೆ ಆ ವಿದ್ಯಾರ್ಥಿಗಳು ಅವರವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹೇಳಿದರು.

ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಮಾತನಾಡಿ, ಪುಟಾಣಿ ಮಕ್ಕಳ ಪ್ರತಿಭೆಗಳು ಪ್ರತಿಯೊಬ್ಬರ ಮನಸ್ಸನ್ನು ಆಕರ್ಷಿಸುತ್ತದೆ. ಇಂದು ಎಲ್ಲರೂ ಸಂಭ್ರಮಿಸಿ, ಭಾಗವಹಿಸಿ ಎಲ್ಲರೂ ಅವಕಾಶವನ್ನು ಬಳಸಿಕೊಳ್ಳಿ ಎಂದು ಶುಭ ಹಾರೈಸಿದರು.

ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲೆ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್, ಕೋಓರ್ಡಿನೇಟರ್ ಸುಜಾತ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವು ನಡೆಯಿತು.

ವಿದ್ಯಾರ್ಥಿಗಳಾದ ಆತ್ಮಿ ನಿರೂಪಿಸಿ, ಬ್ರಾಹ್ಮಿ ಸ್ವಾಗತಿಸಿ, ಆಸ್ತಿಕ್ ವಂದಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments