ಹೆಬ್ರಿ : ಹೆಬ್ರಿ ತಾಲ್ಲೂಕು ಕಚೇರಿಗೆ ಗುರುವಾರ ಲೋಕಾಯುಕ್ತ ಡಿವೈಎಸ್ ಪಿ ಹಾಲಮೂರ್ತಿ ನೇತ್ರತ್ವದ ತಂಡ ದಿಡೀರ್ ಭೇಟಿ ನೀಡಿ ಎಡಿಎಲ್ಆರ್ ವಿಭಾಗದಲ್ಲಿ ಪರಿಶೀಲನೆ ನಡೆಸಿ, ಬಾಕಿ ಇರುವ ಅನೇಕ ಕಡತಗಳನ್ನು ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 6 ರ ತನಕ ಲೋಕಾಯುಕ್ತ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದರು.
ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಪ್ರಸನ್ನ, ಅಬ್ದುಲ್ ಜಲಲ್, ಸುದೀಪ್ ಇದ್ದರು.



