ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಹೆಬ್ರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್, ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ವಿವಿಧ ಪ್ರಮುಖರಾದ ಹೆಚ್. ಬಿ ಸುರೇಶ, ದಿನೇಶ್ ಶೆಟ್ಟಿ, ಸಂದೀಪ್ ಆಚಾರ್ಯ, ಹರೀಶ್ ಶೆಟ್ಟಿ ನಾಡ್ಪಾಲು, ನಿತೀಶ್ ಎಸ್ ಪಿ, ನಿಲೇಶ್ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.



