Wednesday, September 23, 2026
Homeಹೆಬ್ರಿಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ ವಿದ್ಯಾರ್ಥಿನಿ ಸುಹಾನಿ ಚಾರ ದ್ವಿವಿಧ ಸಾಧನೆಗಳ ಗರಿ

ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ ವಿದ್ಯಾರ್ಥಿನಿ ಸುಹಾನಿ ಚಾರ ದ್ವಿವಿಧ ಸಾಧನೆಗಳ ಗರಿ

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಹಾಗೂ ಪಿ.ಆರ್.ಎನ್. ಅಮೃತ ಭಾರತಿ ವಿದ್ಯಾಲಯ, ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಮೇಳ, ಗಣಿತ, ವೇದಗಣಿತ ಹಾಗೂ ಸಂಸ್ಕೃತಿ ಜ್ಞಾನ ಮಹೋತ್ಸವ–2026ರಲ್ಲಿ ಶಿಶುವರ್ಗ ವಿಭಾಗದ ಕಥಾಕಥನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿದ್ಯಾರ್ಥಿನಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದರೊಂದಿಗೆ, ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ, ಹೆಬ್ರಿ ನೇತೃತ್ವದಲ್ಲಿ, ಲಯನ್ಸ್ ಕ್ಲಬ್ ಹೆಬ್ರಿಸಿಟಿ ಹಾಗೂ ನೇತಾಜಿ ಫ್ರೆಂಡ್ಸ್, ಮುದ್ರಾಡಿ ಇವರ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ‘ ಚಾಣಕ್ಯ ಚಿತ್ತಾರ–2026’ರ ಜೂನಿಯರ್ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿಯೂ ತೃತೀಯ ಸ್ಥಾನ ಗಳಿಸಿದ್ದಾರೆ.

ಕಥಾಕಥನ ಮತ್ತು ಚಿತ್ರಕಲಾ—ಎರಡು ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿರುವ ವಿದ್ಯಾರ್ಥಿನಿಯು ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾಳೆ. ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು ಹಾಗೂ ಹಿತೈಷಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!