ವಿದ್ಯಾರ್ಥಿಗಳನ್ನು ಸಮಾಜಕ್ಕೆ ಆಸ್ತಿಯನ್ನಾಗಿಸುವ ಕಾರ್ಯ ಶಿಕ್ಷಕರಿಂದ ಸಾಧ್ಯ: ನಾಗರಾಜ್ ಶೆಟ್ಟಿ
ಹೆಬ್ರಿ : ವಿದ್ಯಾರ್ಥಿಗಳನ್ನು ಸಮಾಜಕ್ಕೆ ಆಸ್ತಿಯನ್ನಾಗಿಸುವ ಕಾರ್ಯ ಶಿಕ್ಷಕರಿಂದ ಸಾಧ್ಯ. ಶಿಕ್ಷಕರು ತಮ್ಮ ಜ್ಞಾನ ಮತ್ತು ಅನುಭವವನ್ನು ಇಂತಹ ತರಬೇತಿಗಳ ಮೂಲಕ ಇನ್ನೂ ವಿಸ್ತರಿಸಿ ವಿದ್ಯಾರ್ಥಿಗಳ ಏಳಿಗೆಗೆ ಸಹಾಯಕವಾಗಬೇಕು ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿಯವರು ಹೇಳಿದರು.
ಅವರು ಸಿಬಿಎಸ್ಇ ಬೋರ್ಡಿನ ಸೆಂಟರ್ ಆಫ್ ಎಕ್ಸಲೆನ್ಸಿ ಬೆಂಗಳೂರು ಮತ್ತು ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲಿನ ಜಂಟಿ ಆಶ್ರಯದಲ್ಲಿ ನಡೆದ, “ಕ್ರಿಟಿಕಲ್ ಅಂಡ್ ಕ್ರಿಯೇಟಿವ್ ಥಿಂಕಿಂಗ್” ಎಂಬ ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗ ಪೊಲೀಸ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಮಾರ್ಗರೇಟ್ ಪ್ರಕಾಶ್ ಮತ್ತು ಉಡುಪಿಯ ಮಾಧವ ಕೃಪಾ ಸ್ಕೂಲಿನ ಶಿಕ್ಷಕಿಯಾದ ಸುಪ್ರಿಯಾ ಎಸ್ ಶೆಟ್ಟಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ ಉಪಪ್ರಾಂಶುಪಾಲರಾದ ದೀಪಕ್ ಎನ್, ಕಾರ್ಯಕ್ರಮದ ಸಂಯೋಜಕರಾದ ಗೋಪಾಲ್ ಆಚಾರ್ಯ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಂಗ್ಲ ಭಾಷಾ ಶಿಕ್ಷಕಿಯರಾದ ವೀಣಾ ನಿರೂಪಿಸಿ, ನಿವೇದಿತ ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ಮಂಜುಳಾ ವಂದಿಸಿದರು.



