Thursday, September 24, 2026
Homeಹೆಬ್ರಿಕಸ್ತೂರಿ ರಂಗನ್ ವರದಿ ಜಾರಿಗೊಳಿಸದೇ ಮಲೆನಾಡಿಗರ ಬದುಕು ಉಳಿಸಿ : ಮಂಜುನಾಥ್ ಗೌಡ

ಕಸ್ತೂರಿ ರಂಗನ್ ವರದಿ ಜಾರಿಗೊಳಿಸದೇ ಮಲೆನಾಡಿಗರ ಬದುಕು ಉಳಿಸಿ : ಮಂಜುನಾಥ್ ಗೌಡ

ಶಿವಮೊಗ್ಗ : ಕಸ್ತೂರಿರಂಗನ್ ವರದಿ ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ವರದಿಯನ್ನು ಕೈಬಿಡಬೇಕು ಎಂದು ಪಶ್ಚಿಮ ಘಟ್ಟ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಒತ್ತಾಯಿಸಿದರು.

ತೀರ್ಥಹಳ್ಳಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆ ಆಲಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರೇ ಬಂದಿರುವುದು ಸ್ವಾಗತಾರ್ಹ. ಅರಣ್ಯ ಇಲಾಖೆ ಅಧಿಕಾರಿಗಳಿಂದ ಶವಸಂಸ್ಕಾರಕ್ಕೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಅಡಿಕೆ ನಿಷೇಧ ಮಾಡಬಾರದು; ಅಗತ್ಯವಿದ್ದರೆ ನಿಕೋಟಿನ್ ನಿಷೇಧಿಸಲಿ. ಮಲೆನಾಡಿಗರ ಬದುಕು ಉಳಿಸಲು ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ವಿಚಾರದಲ್ಲಿ ತೀರ್ಥಹಳ್ಳಿ ಜನರು ರಾಜಕೀಯ ಭೇದ ಮರೆತು ಸರ್ಕಾರದೊಂದಿಗೆ ನಿಲ್ಲಲಿದ್ದಾರೆ ಎಂದರು.

ಹಾಲಿನ ದರ ಹೆಚ್ಚಿಸಬೇಕು ಹಾಗೂ ಯು.ಆರ್. ಅನಂತಮೂರ್ತಿ ಅಧ್ಯಯನ ಪೀಠವನ್ನು ಮತ್ತೆ ತೀರ್ಥಹಳ್ಳಿಗೆ ನೀಡಬೇಕು ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!