Wednesday, September 23, 2026
Homeಹೆಬ್ರಿಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಮಹಾಸಭೆ.

ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಮಹಾಸಭೆ.

ಸಂಘದ ಅತ್ಯುತ್ತಮ ಸೇವೆಯಿಂದ ” ಎ” ಗ್ರೇಡ್ ಮಾನ್ಯತೆ : ನವೀನ್ ಕೆ ಅಡ್ಯಂತಾಯ.

ಹೆಬ್ರಿ : ನಮ್ಮ ಸಹಕಾರಿ ಸಂಘವು ಉತ್ತಮವಾಗಿ ಕೆಲಸ ಮಾಡಿರುವುದರಿಂದ ಎ ಗ್ರೇಡ್ ಮಾನ್ಯತೆ ಬಂದಿರುತ್ತದೆ. 58 ಲಕ್ಷ ಲಾಭಗಳಿಸಿರುವುದು ಉತ್ತಮವಾದ ಸಾಧನೆ ರೈತರಹಿತ ಹಿತಕ್ಕಾಗಿ ಸಾಲದ ವಿಭಾಗಗಳಲ್ಲಿ ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ ಇದರಿಂದ ಹೆಚ್ಚು ಜನರು ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ ಹೇಳಿದರು.

ಅವರು ಹೆಬ್ರಿಯ ಶ್ರೀ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಹೇಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೈನುಗಾರಿಕೆ, ಬೆಳೆ ಸಾಲವನ್ನು ಹೆಚ್ಚಾಗಿ ನೀಡಿ ರೈತರ ಕಲ್ಯಾಣಕ್ಕೆ ಶ್ರಮವಹಿಸಿದ್ದೇವೆ. ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಾಗ ಸಂಘದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ನವೀನ್ ಕೆ ಅಡ್ಯಂತಾಯ ಹೇಳಿದರು.

ಬೇಳಂಜೆ ಕೊಪ್ಪರಗುಂಡಿ ಸಂಜೀವ ಶೆಟ್ಟಿ ಪ್ರಾಯೋಜಕತ್ವದ ಉತ್ತಮ ಕೃಷಿಕ ದತ್ತಿನಿಧಿ ಪ್ರಶಸ್ತಿಯನ್ನು ಶ್ರೀಕಾಂತ್ ಭಟ್ ಎಲಕೊಡು ಶಿವಪುರ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ಸದಸ್ಯರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ಸಿಇಒ ಶೀನ ನಾಯ್ಕ್, ಸದಸ್ಯರಾದ ಪಾಂಡುರಂಗ ಪೂಜಾರಿ, ರಾಜೀವ ಶೆಟ್ಟಿ, ಭೋಜ ಪೂಜಾರಿ, ಅಶೋಕ ಕುಮಾರ್ ಶೆಟ್ಟಿ ಚೋರಾಡಿ, ವಿಜೇಂದ್ರ ಶೆಟ್ಟಿ ಸಲಹೆ ಸೂಚನೆ ನೀಡಿದರು.

ದಕ್ಷ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಜಯಂತ್ ಕುಮಾರ್, ನಿರ್ದೇಶಕರಾದ ಬಿ ಕರುಣಾಕರ ಶೆಟ್ಟಿ, ಪುಟ್ಟಣ್ಣ ಭಟ್, ದಯಾನಂದ ಶೆಟ್ಟಿ, ಅಮೃತ್ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ ಕಾನ್ಬೆಟ್ಟು, ರಾಘವೇಂದ್ರ ನಾಯ್ಕ್, ವೀಣಾ ಪ್ರಭು, ಕೆ. ದೇವು, ಸುಧಾ ಜಿ ನಾಯಕ್ ಇದ್ದರು. ಸಿಇಒ ಶೀನ ನಾಯ್ಕ್ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!