Monday, November 9, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. - ೨೬ನೇ ವರ್ಷದ ನವರಂಗೋತ್ಸವ ಸಂಪನ್ನ.

ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. – ೨೬ನೇ ವರ್ಷದ ನವರಂಗೋತ್ಸವ ಸಂಪನ್ನ.

ಅಮಿತ ಆರ್‌ ಹೆಗ್ಡೆ ಅವರಿಗೆ ” ಕಮಲಮ್ಮ ಸೇವರತ್ನ ” ಪ್ರಶಸ್ತಿ.

ಮುದ್ರಾಡಿ ಕ್ಷೇತ್ರ ಬೆಳಗಲಿ : ಶ್ರೀ ರಾಜಶೇಖರಾನಂದ ಸ್ವಾಮೀಜಿ.

ಮುದ್ರಾಡಿ : ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ಮತ್ತು ಅಭಹಹಸ್ತೆ ಶ್ರೀ ಆದಿಶಕ್ತಿ ಕ್ಷೇತ್ರ ಧರ್ಮಾಧಿಕಾರಿ ಸುಕುಮಾರ್‌ ಮೋಹನ್‌ ಮತ್ತು ಅವರ ಬಳಗದಿಂದ ಇನ್ನಷ್ಟು ಬೆಳಗಲಿ, ನವರಾತ್ರಿಯ ಕಾಲದಲ್ಲಿ ನವಶಕ್ತಿಯ ಆರಾಧನೆಯ ಜೊತೆಗೆ ಕಲಾಆರಾಧನೆ ಮಾಡುತ್ತಿರುವುದು ಅತ್ಯಂತ ಪುಣ್ಯದ ಕಾರ್ಯ. ಮುದ್ರಾಡಿ ಕ್ಷೇತ್ರಕ್ಕೊಂದು ಅದ್ಭುತ ಸೆಳೆತವಿದೆ. ಪರಿಶ್ರಮದಿಂದ ಕ್ಷೇತ್ರವನ್ನು ಬೆಳಗಿಸುತ್ತಿರುವಾಗ ನಮಗೂ ಕ್ಷೇತ್ರಕ್ಕೆ ಆಗಮಿಸುವ ಮನಸ್ಸು ಬರುತ್ತದೆ. ಕಠಿಣ ಸಾಧನೆಯಿಂದ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ, ಕ್ಷೇತ್ರದ ಭಕ್ತರನ್ನು ಅಭಯಹಸ್ತೆ ಆದಿಶಕ್ತಿಯು ಹರಸಲಿ ಎಂದು ಮಂಗಳೂರು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ 10 ದಿನಗಳ ಕಾಲ ನಡೆದ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದ ಸಂಪನ್ನ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಆಶೀರ್ವಚನ ನೀಡಿದರು.

ದೇಶಕ್ಕೆ ಬರುವ ಎಲ್ಲಾ ಅಡೆತಡೆಗಳು ದೂರವಾಗಲಿ, ನಮ್ಮೇಲ್ಲರ ಕನಸಿನ ಭವ್ಯ ಭಾರತದ ಕನಸು ನನಸಾಗುವಂತಾಗಲಿ ಎಂದು ಶ್ರೀರಾಜಶೇಖರಾನಂದ ಸ್ವಾಮೀಜಿ ಆಶಿಸಿದರು.

ಅಧ್ಯಕ್ಷತೆ ವಹಿಸಿದ ಯಕ್ಷಧ್ರುವ ಸತೀಶ್‌ ಶೆಟ್ಟಿ ಪಟ್ಲ ಮಾತನಾಡಿ ದೇವಿ ಭಕ್ತಿಗೆ ಒಲಿಯುತ್ತಾಳೆ ಎಂಬುದು ಮುದ್ರಾಡಿ ಕ್ಷೇತ್ರದಲ್ಲಿ ಸತ್ಯವಾಗಿದೆ. ಭಕ್ತಿಗೆ ಒಲಿದ ಕ್ಷೇತ್ರದಲ್ಲಿ ಸಾನಿಧ್ಯವಿರುತ್ತದೆ. ಧರ್ಮಾಧಿಕಾರಿ ಸುಕುಮಾರ್‌ ಮೋಹನ್‌ ಮತ್ತು ಬಳಗದ ಭಕ್ತಿ ಶ್ರದ್ಧೆ ಮತ್ತು ನಿಷ್ಠೆಯಿಂದ ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ಮತ್ತು ಅಭಹಹಸ್ತೆ ಶ್ರೀ ಆದಿಶಕ್ತಿ ಕ್ಷೇತ್ರ ಬೆಳಗುತ್ತಿದೆ ಎಂದರು.

ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರ ಮಹಾಮಾತೆ ಕಮಲ ಧರ್ಮಯೋಗಿ ಮೋಹನ್‌ ಸ್ವಾಮೀಜಿ ಅವರ ಸಂಸ್ಮರಣೆಗಾಗಿ ನೀಡುವ ಪ್ರಥಮ ವರ್ಷದ ಮುದ್ರಾಡಿ ಕಮಲಮ್ಮ ಸೇವರತ್ನ ಪ್ರಶಸ್ತಿಯನ್ನು ರಾಧಾಸಂಜೀವ ನಿವಾಸ ಶೆಟ್ಟಬೆಟ್ಟು ನಡುಮನೆ ಕುಟುಂಬದ ಶ್ರೀ ವನದುರ್ಗಾ ದೇವಿ ಕ್ಷೇತ್ರವನ್ನು ಮುನ್ನಡೆಸುತ್ತಿರುವ ಸಾಧಕಿ. ಕಲೆ, ಉದ್ಯಮ, ವಿಮಾ ಕ್ಷೇತ್ರ, ಧಾರ್ಮಿಕ ಹಾಗೂ ಸಮಾಜಮುಖಿ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾದ ಶೆಟ್ಟಿಬೆಟ್ಟು ಶ್ರೀ ವನದುರ್ಗಾದೇವಿ ಕ್ಷೇತ್ರದ ಅಮಿತ ಆರ್‌ಹೆಗ್ಡೆ ಅವರಿಗೆ ಪ್ರದಾನ ಮಾಡಲಾಯಿತು.

ಅಯೋಧ್ಯೆ ಉದ್ಯಮಿ ಸಮಾಜ ಸೇವಕ ಕುಂದಾಪುರ ನಂದ್ರೋಳ್ಳಿ ತೋಟದ ಮನೆಯ ಪ್ರಭಾಕರ ಶೇಖರ ಶೆಟ್ಟಿ ಅವರಿಗೆ ಮಂಗಳವಾರ ಕರ್ಣಾಟನಾಡ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ನಾಟ್ಕ ಮುದ್ರಾಡಿ ಅಧ್ಯಕ್ಷ ರಂಗ ನಿರ್ದೇಶಕ, ಧರ್ಮಾಧಿಕಾರಿ ಸುಕುಮಾರ್‌ ಮೋಹನ್‌ ಆಶೀರ್ವಚನ ನೀಡಿದರು.  ಯಕ್ಷಗಾನ ಪ್ರಸಂಗ ಕರ್ತ ಪಿ.ವಿ.ಆನಂದ ಸಾಲಿಗ್ರಾಮ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ರಂಗನಿರ್ದೇಶಕ ಜಗದೀಶ ಜಾಲ, ಕ್ಷೇತ್ರದ ಸುಧೀಂದ್ರ ಮೋಹನ್‌, ಸುರೇಂದ್ರ ಮೋಹನ್‌, ಉಮೇಶ್‌ ಕಲ್ಮಾಡಿ, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್‌ ಮೋಹನ್‌, ಗಣ್ಯರು, ಭಕ್ತ ಸಮೂಹ ಉಪಸ್ಥಿತರಿದ್ದರು.  ರಚಿತಾ ಕುಲಾಲ್‌ ಕಬ್ಬಿನಾಲೆ ನಿರೂಪಿಸಿ ಸ್ವಾಗತಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!