Saturday, November 7, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ 26ನೇ ನವ ರಂಗೋತ್ಸವ.

ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ 26ನೇ ನವ ರಂಗೋತ್ಸವ.

 

ಅಯೋಧ್ಯೆಯಲ್ಲಿ ” ಹೊಟೇಲ್‌ ಅಯೋಧ್ಯ ” ಸ್ಥಾಪಿಸಿದ ಕುಂದಾಪುರದ ಸಾಧಕ.

ನಂದ್ರೋಳ್ಳಿ ಪ್ರಭಾಕರ ಶೇಖರ ಶೆಟ್ಟಿ ಅವರಿಗೆ ಕರ್ಣಾಟನಾಡ ಪೋಷಕ ಪ್ರಶಸ್ತಿ ಪ್ರದಾನ.

ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನಡೆಯುವ 26ನೇ ನವ ರಂಗೋತ್ಸವದ ಸಮಾರೋಪದಲ್ಲಿ ಮಂಗಳವಾರ ಅಯೋಧ್ಯೆ ಉದ್ಯಮಿ ಸಮಾಜ ಸೇವಕ ಕುಂದಾಪುರ ನಂದ್ರೋಳ್ಳಿ ತೋಟದ ಮನೆಯ ಪ್ರಭಾಕರ ಶೇಖರ ಶೆಟ್ಟಿ ಅವರಿಗೆ ಮಂಗಳವಾರ ಕರ್ಣಾಟನಾಡ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ ಯಶಸ್ವಿ ಉದ್ಯಮಿ ಪ್ರಭಾಕರ ಶೇಖರ ಶೆಟ್ಟಿ ಅವರು ಬೆಳಗಾಂ ನಲ್ಲಿ ಹೊಟೇಲ್‌ ಉದ್ಯಮ ಸ್ಥಾಪಿಸಿ ಬಳಿಕ ಹಂತಹಂತವಾಗಿ ಮುನ್ನಡೆದು ಅಯೋಧ್ಯೆಯಲ್ಲೂ ಹೊಟೇಲ್‌ ಆರಂಭಿಸಿ ಖ್ಯಾತಿಯನ್ನು ಪಡೆದಿದ್ದಾರೆ. ಧಾರ್ಮಿಕ ಸಮಾಜಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿದ್ದಾರೆ. ಮಂಗಳೂರು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಯಕ್ಷಗಾನ ಪ್ರಸಂಗ ಕರ್ತ ಪಿ.ವಿ.ಆನಂದ ಸಾಲಿಗ್ರಾಮ, ಶೆಟ್ಟಿಬೆಟ್ಟು ಶ್ರೀವನದುರ್ಗಾದೇವಿ ಕ್ಷೇತ್ರದ ಅಮಿತಾ ಆರ್‌ ಹೆಗ್ಡೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ರಂಗನಿರ್ದೇಶಕ ಜಗದೀಶ ಜಾಲ, ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಧರ್ಮದರ್ಶಿ ವಿಜಯಕೀರ್ತಿ ಸುಕುಮಾರ ಮೋಹನ್ ಉಪಸ್ಥಿತರಿದ್ದರು.

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!