Sunday, November 8, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿಧ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿಧ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ.

 

ಹೆಬ್ರಿಯ ಹೆಮ್ಮೆಯ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ :

ಗ್ರಾಮೀಣ ಮಕ್ಕಳ ಸಾಧನೆ : ಹೆಬ್ರಿಗೆ ಹೆಮ್ಮೆ : ಬೇಳಂಜೆ ಹರ್ಷ ಶೆಟ್ಟಿ

ಹೆಬ್ರಿ : ಹೆಬ್ರಿಯ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವುದು ಊರಿಗೆ, ನಮಗೆಲ್ಲ ಹೆಮ್ಮೆಯಾಗಿದೆ. ಮಕ್ಕಳ ಅಚಲ ನಿಷ್ಠೆ ಮತ್ತು ಎಲ್ಲರ ಸಮರ್ಪಣಾ ಭಾವದ ಸೇವೆಯಿಂದ ಇದೆಲ್ಲ ಸೇವೆಯಿಂದ ಇದ್ದೆಲ್ಲವೂ ಸಾದ್ಯವಾಗಿದೆ ಎಂದು ಉದ್ಯಮಿ ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬೇಳಂಜೆ ಹರ್ಷ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿಧ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟದಲ್ಲಿ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಾಲಿಬಾಲ್ ಕ್ರೀಡಾಪಟುಗಳಿಗೆ ಶುಕ್ರವಾರ  ನೀಡಿದ ಭವ್ಯ ಸ್ವಾಗತ ಕಾರ್ಯಕ್ರಮದ ಬಳಿಕ ಶಾಲೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.  

68 ವರ್ಷಗಳ ಇತಿಹಾಸದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಶಾಲೆಗೆ, ಹೆಬ್ರಿ ತಾಲ್ಲೂಕಿಗೆ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯವಾಗಿದೆ, ರಾಷ್ಟ್ರಮಟ್ಟಕ್ಕೆ ಆಯ್ಕೆ ಅನೀಶ್‌ ವಡ್ಡಮೇಶ್ವರ ಮತ್ತು ಅವರ ತಂಡದ ವಿದ್ಯಾರ್ಥಿಗಳಾದ ನಿಶಾನ್‌, ಯಮನೂರ,ಸೃಜನ್‌ ಮತ್ತು ದಿತಿನ್‌ ಅವರ ಸಾಧನೆ ಅದ್ಭುತ ಎಂದು ಶಿಕ್ಷಕರಾದ ಪ್ರವೀಣ್‌ ಕುಮಾರ್‌ ಶೆಟ್ಟಿ ಹೇಳಿದರು.

ಹೆಬ್ರಿಯ ಹೆಮ್ಮೆಯ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತದ ಮೆರವಣಿಗೆಯು ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ರಿಯಿಂದ ಆರಂಭಗೊಂಡು ಶ್ರೀ ಅನಂತಪದ್ಮನಾಭ ದೇವಸ್ಥಾನ, ಹೆಬ್ರಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ತಲುಪಿತು.

ಭವ್ಯ ಮೆರವಣಿಗೆಯ ದಾರಿಯುದ್ದಕ್ಕೂ ಕ್ರೀಡಾಭಿಮಾನಿಗಳು, ಸಂಘಸಂಸೈಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಹೆಬ್ರಿಯ ಪ್ರಮುಖರು ಕ್ರೀಡಾತಾರೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಮೆರವಣಿಗೆ ಮುಗಿದ ತಕ್ಷಣ ಶಾಲಾ ಸಭಾಂಗಣದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಇನ್ಸ್ಫಾಯರ್‌ ಅವಾರ್ಡ್‌ ಪಡೆದ ಸುಕೇಶ್‌ ಅವರನ್ನು ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕ್ರೀಡಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು, ತಾಲ್ಲೂಕಿನ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ನೂರಾರು ಮಂದಿ ಭವ್ಯ ಮೆರವಣಿಗೆಯಲ್ಲಿ ಭಾಗಿಯಾದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಧ್ಯಕ್ಷ ವಿಜೇಂದ್ರ ಶೆಟ್ಟಿ ಸೀತಾನದಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್‌, ವಿವಿಧ ಪ್ರಮುಖರಾದ ರಾಜೇಶ್ ನಾಯಕ್, ರಾಮಕೃಷ್ಣ ಆಚಾರ್, ಸತೀಶ್ ಕುಲಾಲ್, ಟಿ.ಜಿ ಆಚಾರ್ಯ, ಹೆಚ್. ಜನಾರ್ಧನ್, ರಾಜೇಶ್ ಆಚಾರ್ಯ ಮಠದಬೆಟ್ಟು, ಸುದೀಪ್, ಶ್ರೀಕಾಂತ್ ಪೂಜಾರಿ, ವಿಜಯಕುಮಾರ್, ಸುರೇಶ್ ಭಂಡಾರಿ, ರಾಘವೇಂದ್ರ ನಾಯ್ಕ್, ವಿಜಯಕುಮಾರ್, ಬಾಲಚಂದ್ರ ಮುದ್ರಾಡಿ, ಕರುಣಾಕರ, ಶಂಕರ್ ಶೇರಿಗಾರ್, ರಾಜೇಶ್ ಪೂಜಾರಿ, ಬೇಳಂಜೆ ಹರೀಶ ಪೂಜಾರಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ಮೆರವಣಿಗೆಯಲ್ಲಿ ನಿರೂಪಿಸಿದರು.ಉಪಪ್ರಾಂಶುಪಾಲ ದಿವಾಕರ್ ಎಸ್. ಮರಕಾಲ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!