ಹೆಬ್ರಿ ಕರುಣಾಕರ ನಾಯ್ಕ್
ಹೆಬ್ರಿ : ಹೆಬ್ರಿ ಅಡಾಲಬೆಟ್ಟು ಹೊಸಮನೆಯ ಕರುಣಾಕರ ನಾಯ್ಕ್ (೬೮) ಅವರು ಅನಾರೋಗ್ಯದಿಂದ ಗುರುವಾರ ನಿಧನರಾದರು.
ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆಲ್ಲಿಸಿದ್ದರು. ಹೆಬ್ರಿಯ ಇಂದಿರಾನಗರ ಮದಗ ಶ್ರೀ ನಾಗಬ್ರಹ್ಮ ಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಹೆಬ್ರಿ ಮರಾಠಿ ಸಂಘದ ಅಧ್ಯಕ್ಷರಾಗಿ ಹಾಗೂ ಮದಗ ಫೌಂಡೇಶನ್ ಟ್ರಸ್ಟ್ ಪದಾಧಿಕಾರಿಯಾಗಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಸೇವೆಯ ಮೂಲಕ ಸಮಾಜದಲ್ಲಿ ಗೌರವ ಮತ್ತು ಪ್ರೀತಿ ಗಳಿಸಿದ್ದಾರೆ. ಬೀಡಿ ಉದ್ಯಮದ ಕಂಟ್ರಾಕ್ಟರ್ ಆಗಿ ನೂರಾರು ಮಂದಿಗೆ ಉದ್ಯೋಗ ನೀಡಿ ಬೀಡಿ ಕರ್ಣಣ್ಣ ಎಂದೇ ಖ್ಯಾತರಾಗಿದ್ದರು. ಮೃತರಿಗೆ ಪತ್ನಿ ಹಾಗೂ ಮಗಳಿದ್ದಾರೆ. ಗುರುವಾರ ರಾತ್ರಿಯೇ ಅಂತ್ಯ ಸಂಸ್ಕಾರ ನಡೆದಿದ್ದು ನೂರಾರು ಮಂದಿ ಅಂತಿಮ ದರ್ಶನ ಪಡೆದರು.



