Sunday, November 8, 2026
Homeಹೆಬ್ರಿ ಗ್ರಾಮ ಪಂಚಾಯತ್‌ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ : ಹೆಬ್ರಿ ಬಂಗಾರಗುಡ್ಡೆಯ ರೋಶಿತ್ ಚಾಂಪಿಯನ್.

ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ : ಹೆಬ್ರಿ ಬಂಗಾರಗುಡ್ಡೆಯ ರೋಶಿತ್ ಚಾಂಪಿಯನ್.

ಹೆಬ್ರಿ  : ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆಯ ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಬಂಗಾರಗುಡ್ಡೆಯ ರೋಶಿತ್ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ 600ಮೀ ಪ್ರಥಮ, 400ಮೀ ದ್ವಿತೀಯ ಹಾಗೂ 4-100ಮೀ ರಿಲೇ ತೃತೀಯ ಸ್ಥಾನವನ್ನು ಪಡೆದು ವೈಯುಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದಿದ್ದಾನೆ. ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲೂ ಚಾಂಪಿಯನ್ ಆಗಿರುವ ರೋಶಿತ್ ಜಿಲ್ಲಾ ಮಟ್ಟದಲ್ಲೂ ಚಾಂಪಿಯನ್ ಆಗಿ ಮೂಡಿಬಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ಬೆಳ್ವೆ ಪಂಚಾಯತ್ ಸಿಬ್ಬಂದಿ ರಾಜು ಮತ್ತು ಶೋಭಾ ದಂಪತಿಗಳ ಮಗನಾಗಿದ್ದು ದೈಹಿಕ ಶಿಕ್ಷಣ ಶಿಕ್ಷಕಿ ಕಮಲಿನಿ ತರಬೇತಿಯನ್ನು ನೀಡಿರುತ್ತಾರೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!