Sunday, November 8, 2026

ಹೆಬ್ರಿ :  ಕನ್ನಡವನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಬೆಳೆಸೋಣ, ಕನ್ನಡ ಬೆಳೆದರೆ ಕನ್ನಡ ಉಳಿಯುತ್ತದೆ ಆ ಮೂಲಕ ಬೆಳಗುತ್ತದೆ. ಅದೆಲ್ಲವೂ ನಮ್ಮೀಂದಲೆ ಆಗಬೇಕು ಎಂದು ಹೆಬ್ರಿ ತಹಶೀಲ್ದಾರ್  ತಹಶೀಲ್ಧಾರ್‌ ರಾಕೇಶ್‌  ಪ್ರಾನ್ಸೀಸ್‌ ಬ್ರೀಟ್ಟೋ ಹೇಳಿದರು.

ಅವರು ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಗೆ ಪುಷ್ಪನಮನ  ಸಲ್ಲಿಸಿ ಮಾತನಾಡಿದರು.

 ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್, ಹೆಬ್ರಿ ಕನ್ನಡ ಸಾಹಿಥ್ಯ ಪರಿಷತ್ತು ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಹೆಬ್ರಿಯ ವಿವಿಧ ಗಣ್ಯರಾದ ಹೆಬ್ರಿ ಭಾಸ್ಕರ ಜೋಯಿಷ್, ಬೇಳಂಜೆ ಹರ್ಷ ಶೆಟ್ಟಿ, ಅಣ್ಣಪ್ಪ ಕುಲಾಲ್, ಉಪ ತಹಶೀಲ್ದಾರ್ ರಾಘವೇಂದ್ರ ನಾಯಕ್, ರಾಹೆಲ್ ಸುಜ್ಯೋತಿ , ಕಂದಾಯ ನಿರೀಕ್ಷಕ ಸುಧೀರ ಶೆಟ್ಟಿ, ತಾಲ್ಲೂಕು ಸರ್ವೇಯರ್ ರವಿರಾಜ್ ಸೇರಿದಂತೆ, ಸ್ಥಳೀಯ ಪ್ರಮುಖರು, ಗನ್ಯರು, ಸಂಘಸಂಸ್ಥೆಯ ಪ್ರಮುಖರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!