ಅಣ್ಣಪ್ಪ ಕುಲಾಲ್ ರಿಂದ ಹೆಬ್ರಿಯಲ್ಲಿ ಕರವೇ ಸ್ಥಾಪನೆ : ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ.
ಹೆಬ್ರಿ : ಹೆಬ್ರಿ ಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕ ರಕ್ಷಣಾ ಹೆಬ್ರಿ ಘಟಕದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆಯನ್ನು ಹೆಬ್ರಿಯಲ್ಲಿ ಸ್ಥಾಪಿಸಿದ ಕೀರ್ತಿ ಹೋರಾಟಗಾರ ಮಂಡಾಡಿಜಡ್ಡು ಅಣ್ಣಪ್ಪ ಕುಲಾಲ್ ಅವರಿಗೆ ಸಲ್ಲುತ್ತದೆ. ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆ ಬಳಿಕ ನಾಡಿಗಾಗಿ ಹಲವಾರು ಹೋರಾಟಗಳು ಹೆಬ್ರಿ ಘಟಕದ ಮೂಲಕ ನಡೆದಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಹೆಬ್ರಿಯ ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ ಹೇಳಿದರು.
ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ್ ಕೆ. ಜಿ, ಹಿರಿಯರಾದ ಹೆಬ್ರಿ ಭಾಸ್ಕರ ಜೋಯಿಸ್, ಹೆಬ್ರಿ ಟಿ. ಜಿ ಆಚಾರ್ಯ ಮಾತನಾಡಿದರು. ಸೀತಾನದಿ ವಿಜೇಂದ್ರ ಶೆಟ್ಟಿ, ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ ಕುಮಾರ್, ಹೋರಾಟಗಾರ ಅಣ್ಣಪ್ಪ ಕುಲಾಲ್, ವಿವಿಧ ಪ್ರಮುಖರಾದ ದಿನಕರ ಪ್ರಭು, ರಾಘವೇಂದ್ರ ನಾಯ್ಕ್ ಹೆಬ್ರಿ, ಸುರೇಶ್ ಭಂಡಾರಿ,ಇಂದಿರಾನಗರ ಸಂತೋಷ್ ನಾಯ್ಕ್, ಕನ್ಯಾನ ಸಂತೋಷ ನಾಯಕ್, ರವಿ ಶೆಟ್ಟಿ, ಕುಚ್ಚೂರು ಶ್ರೀಕಾಂತ್ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಘಟಕದ ಪ್ರಮುಖರಾದ ನಿತೀಶ್ ಎಸ್ ಪಿ ನಿರೂಪಿಸಿ ಸ್ವಾಗತಿಸಿದರು.



