ಶಿವಪುರ : ಕುಲಾಲ ಸಮುದಾಯವು ಸ್ವಾಭಿಮಾನ ಮತ್ತು ಶಿಕ್ಷಣಕ್ಕಾಗಿ ಒಗ್ಗೂಡುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಶಿವಪುರ ಕುಲಾಲ ಸಂಘವು ಇಡೀ ಸಮಾಜಕ್ಕೆ ಮಾದರಿಯಾಗಿರುವ ಸಂಘಗಳಲ್ಲಿ ಒಂದಾಗಿದೆ” ಎಂದು ಕುಂದಾಪುರದ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಭಾನುವಾರ ಶಂಕರದೇವ ದೇವಸ್ಥಾನದ ಸಭಾಭವನದಲ್ಲಿ ನಡೆದ ಶಿವಪುರ ಕುಲಾಲ ಸಂಘದ 2026–27ನೇ ಸಾಲಿನ 11ನೇ ವರ್ಷದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಪುರ ಕುಲಾಲ ಸಂಘದ ಅಧ್ಯಕ್ಷ ವಾಸುದೇವ ಕುಲಾಲ್ ವಾಂಟ್ಯಾಳ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾಜ ಸೇವೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯರು ಕೃಷಿಕರಾದ ಕೊಲ್ಲ ಹಾಂಡ ಮಾರ್ಮಕ್ಕಿ, ಹಿರಿಯರಾದ ಭೋಜು ಕುಲಾಲ್ ಸೂರಿಮಣ್ಣು, ತುಳು ಭಾಷಣ ಸ್ಪರ್ಧೆಯ ರಾಜ್ಯಮಟ್ಟದ ವಿಜೇತೆ ವರ್ಷಿಣಿ ಕುಲಾಲ್ ಕೆಳಮುಳುಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಸೈನಿಕರಾದ ರಮೇಶ್ ಕುಲಾಲ್ ದೂಪದಕಟ್ಟೆ, ಹೆಬ್ರಿ ಜೇಸಿಐ ಅಧ್ಯಕ್ಷ ಸತೀಶ್ ಕುಲಾಲ್, ಐತು ಕುಲಾಲ್ ಕನ್ಯಾನ, ಮಂಜುನಾಥ ಕುಲಾಲ್ ಜನ್ಸಾಲೆ, ಕಾರ್ಯದರ್ಶಿ ಮಣಿಕಂಠ ಕುಲಾಲ್, ಗೌರವಾಧ್ಯಕ್ಷ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಸುನಂದ ಕುಲಾಲ್ ಉಪಸ್ಥಿತರಿದ್ದರು.

ಶರತ್ ಕುಲಾಲ್ ಮತ್ತು ಸೀಮಾ ಕುಲಾಲ್ ಅವರ ನಿರೂಪಣೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸನ್ಮಾನ ಪತ್ರವನ್ನು ದೀಕ್ಷಾ ಕುಲಾಲ ಮತ್ತು ಪೂರ್ಣೇಶ ಕುಲಾಲ್ ವಾಚಿಸಿದರು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾಪ್ರೋತ್ಸಾಹ ಧನ ವಿತರಣಾ ಯಾದಿಯನ್ನು ರಮೇಶ ಕುಲಾಲ್ ವಾಂಟ್ಯಾಳ ವಾಚಿಸಿದರು.

ರಮಿತಾ ಪ್ರಾರ್ಥನೆ ಮಾಡಿದರು.ಸಂಘದ ಪೂರ್ವಾಧ್ಯಕ್ಷ ಜಗನ್ನಾಥ ಕುಲಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಂಜುನಾಥ ಕುಲಾಲ್ ನಿರೂಪಿಸಿದರು. ಕಾರ್ಯದರ್ಶಿ ಮಣಿಕಂಠ ಕುಲಾಲ್ ವರದಿ ಮಂಡಿಸಿದರು. ಸಂತೋಷ ಕುಲಾಲ ಲೆಕ್ಕಪತ್ರ ಮಂಡನೆ ಮಾಡಿದರು. ಸೀಮಾ ರಮೇಶ್ ವಂದಿಸಿದರು. ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಮಹಾಸಮಾವೇಶದಲ್ಲಿ ಭಾಗಿಯಾದರು.



