ಬೇಳಂಜೆ : ಹೆಬ್ರಿಯ ಬೇಳಂಜೆ ದೂಪದಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಲಯನ್ಸ್ ಕ್ಲಬ್ ಹೆಬ್ರಿ ಹಾಗೂ ಹೆಬ್ರಿ ಸಿಟಿ ವತಿಯಿಂದ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ಗುರುವಾರ ಶಾಲೆಯಲ್ಲಿ ನೀಡಲಾಯಿತು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಜಯಂತಿ ವಹಿಸಿ ಮಾತನಾಡಿ ಶಾಲೆಗೆ ಪರಿಸರ ದಿನಾಚರಣೆಯಂದು ಗಿಡಗಳನ್ನು ನೀಡಿ ಪರಿಸರ ದಿನಾಚರಣೆಯನ್ನು ಆಚರಿಸಿದ ಅಲಯನ್ಸ್ ಕ್ಲಬ್ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿದೆ ಎಂದರು.
ಅಲಯನ್ಸ್ ಕ್ಲಬ್ ಹೆಬ್ರಿ ಅಧ್ಯಕ್ಷ ಬಾಲಚಂದ್ರ. ಎಂ ಮಾತನಾಡಿ ಹೆಬ್ರಿ ವ್ಯಾಪ್ತಿಯ ಗ್ರಾಮೀಣ ಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಆದ್ಯತೆ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದ್ದೇವೆ ಎಂದು ಹೇಳಿದರು. ಅಲಯನ್ಸ್ ಜಿಲ್ಲಾ ಸಂಪುಟದ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್, ಹೆಬ್ರಿ ಸಿಟಿ ಅಲಯನ್ಸ್ ಕ್ಲಬ್ ಸದಸ್ಯೆ ಪ್ರೇಮ. ಎಸ್. ಪಾಟೀಲ್, ಶಾಲಾ ಸಿ. ಆರ್. ಪಿ. ಪುಷ್ಪ, ಪೋಷಕರು, ಶಾಲಾ ವಿದ್ಯಾರ್ಥಿಗಳು, ಅಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಅಲಯನ್ಸ್ ಕ್ಲಬ್ ಅದ್ಯಕ್ಷ ಬಾಲಚಂದ್ರ ಎಂ. ಅವರನ್ನು ಅಭಿನಂದಿಸಿದರು. ಸಹ ಶಿಕ್ಷಕಿ ಶೋಭಾ ಸ್ವಾಗತಿಸಿ, ವಂದಿಸಿದರು.


