ಹೆಬ್ರಿಯ ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ 1997ರಲ್ಲಿ ” ಮದಗ ಕ್ರಿಕೆಟರ್ಸ್” ನ 11 ಜನ ಕ್ರಿಕೆಟ್ ಆಟಗಾರರಿಂದ ಪ್ರಾರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದು 60 ಜನ ಸದಸ್ಯರನ್ನೊಳಗೊಂಡು ” ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದಗ ಕ್ರಿಕೆಟರ್ಸ್ ( ರಿ) ಇಂದಿರಾನಗರ ಹೆಸರಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈಗ 30ರ ಸಂಭ್ರಮದಲ್ಲಿದೆ. ವರುಷ ವರುಷವು ಭಕ್ತ ಸಮೂಹಕ್ಕೆ ಹರುಷ ನೀಡಿ ಭಕ್ತರನ್ನು ಗಣಪತಿ ಕಾಯುತ್ತಿದ್ದಾನೆ.
10ನೇ ವರ್ಷದಲ್ಲಿ ಬೆಳ್ಳಿಯ ಲಲಾಟ( ಹಣೆಪಟ್ಟಿ), ಬೆಳ್ಳಿಯ ಇಲಿ, ಹಸ್ತಗಳಿಗೆ ಬೆಳ್ಳಿಯ ಪಾ಼ಾಂಕುಶಗಳನ್ನು ಗಣಪತಿಗೆ ಸಮರ್ಪಿಸಲಾಗಿದೆ. ಮಹಾಪೂಜೆ, ಗಣಹೋಮ, ರಂಗಪೂಜೆ, ಮೂಡುಗಣಪತಿ ಸೇವೆಯ ಜೊತೆಗೆ ಅನ್ನದಾನ ನಡೆಯುತ್ತದೆ. ಗಣೇಶೋತ್ಸವದ ರಜತ ಸಂಭ್ರಮವನ್ನು ಕೋವಿಡ್ ಹಿನ್ನಲೆಯಲ್ಲಿ ಅಚರಿಸಲು ಅಸಾಧ್ಯವಾದ ಹಿನ್ನಲೆಯಲ್ಲಿ ಈ ಸಲ 30ರ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಇದೇ 14 ಮತ್ತು 15 ರಂದು 2 ದಿನಗಳ ಸಂಭ್ರಮದ ಇಂದಿರಾನಗರ ಗಣೇಶೋತ್ಸವ ವೈಭವದಿಂದ ನಡೆಯಲಿದೆ. ಸುಮಾರು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀದೇವರಿಗೆ ಬೆಳ್ಳಿಯ ಕಿರೀಟ ಮತ್ತು ಪಂಚಲೋಹದ ಪ್ರಭಾವಳಿಯನ್ನು ಊರಪರವೂರ ಭಕ್ತರ ಸಹಕಾರದಿಂದ ಈ ಸಲ ದೇವರಿಗೆ ಅರ್ಪಣೆಯಾಗಲಿದೆ. ಸಾಂಸ್ಕೃತಿಕ ಮತ್ತು ಕ್ರೀಡೋತ್ಸವ ಕೂಡ ಸಂಭ್ರಮದಲ್ಲಿ ನಡೆಯಲಿದೆ. ವಿವಿಧ ಆಕರ್ಷಕ ಟ್ಯಾಬ್ಲೋಗಳ ಜೊತೆಗೆ ಗಣಪತಿ ದೇವರ ಭವ್ಯ ಪುರಮೆರವಣಿಗೆ ಶೋಭಾಯಾತ್ರೆ 15 ರಂದು ಸಂಜೆ ನಡೆಯಲಿದೆ. ಸಂಘಸಂಸ್ಥೆಗಳು, ಸ್ಥಳೀಯ ಪ್ರಮುಖರು, ದಾನಿಗಳು ವಿಶೇಷ ಸಹಕಾರ ನೀಡಲಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದಗ ಕ್ರಿಕೆಟರ್ಸ್ ( ರಿ) ಇಂದಿರಾನಗರ ಇದರ ಅಧ್ಯಕ್ಷ ಕೆ.ಯಶವಂತ್ ರಾವ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾಜ ಸೇವಕ ನಿತ್ಯಾನಂದ ಇಳಕಾಡು ಮತ್ತು ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಸನ್ಮಾನ ನಡೆಯಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದಗ ಕ್ರಿಕೆಟರ್ಸ್ ( ರಿ) ಇಂದಿರಾನಗರ ಇದರ ಗೌರವಾಧ್ಯಕ್ಷ ಎಚ್.ಪ್ರವೀಣ ಬಲ್ಲಾಳ್, ಶಾಸಕ ಸುನೀಲ್ ಕುಮಾರ್, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಸುರೇಂದ್ರ ಶೆಟ್ಟಿ ಕೋಟೇಶ್ವರ, ಹಿರಿಯ ವಕೀಲ ಎಚ್. ಶೇಖರ ಮಡಿವಾಳ್ ಕಾರ್ಕಳ, ಮುದ್ದೂರು ವಿಎಸ್ಎಸ್ ಸ್ಕೂಲ್ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ, ಉದ್ಯಮಿ ಪ್ರಸನ್ನ ಸೂಡ ಶಿವಪುರ ಭಾಗವಹಿಸುವರು. ಸಮಿತಿಯ ಪದಾಧಿಕಾರಿಗಳು, ಸರ್ವಸದಸ್ಯರು ಸಂಭ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.



