Thursday, September 24, 2026
Homeಹೆಬ್ರಿಹೆಬ್ರಿಯ 51ನೇ ವರ್ಷದ 4 ದಿನಗಳ ಸಾರ್ವಜನಿಕ ಶ್ರೀಗಣೇಶೋತ್ಸವ ಸಂಪನ್ನ

ಹೆಬ್ರಿಯ 51ನೇ ವರ್ಷದ 4 ದಿನಗಳ ಸಾರ್ವಜನಿಕ ಶ್ರೀಗಣೇಶೋತ್ಸವ ಸಂಪನ್ನ

ಸಾಧಕರ ಸನ್ಮಾನ : ವೈಭವದ ಶೋಭಾಯಾತ್ರೆ.

ಹೆಬ್ರಿ : ಹೆಬ್ರಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಶ್ರೀರಾಮ ಮಂಟಪದಲ್ಲಿ 4 ದಿನಗಳ ಕಾಲ ನಡೆದ 51ನೇ ವರ್ಷದ ಶ್ರೀ ಗಣೇಶೋತ್ಸವ ಗುರುವಾರ ಸಂಪನ್ನಗೊಂಡಿತು. ನಾಡ ಹಬ್ಬದಂತೆ ಹೆಬ್ರಿಯ ಶ್ರೀ ಗಣೇಶೋತ್ಸವ ಸಂಭ್ರಮ ವೈಭವದಿಂದ ನಡೆಯಿತು. ಸಾವಿರಾರು ಮಂದಿ ಭಕ್ತಸಮೂಹ ಸಾಕ್ಷಿಯಾದರು. 1500 ಕ್ಕೂ ಹೆಚ್ಚು ಮಂದಿ ಪೂಜೆಯನ್ನು ಸಮರ್ಪಿಸಿದರು. ರಂಗಪೂಜೆ, ಮಹಾಅನ್ನದಾನ, ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ ನಡೆಯಿತು. ಹೆಬ್ರಿ ನಾಗಾರಾಜ ಜೋಯಿಸ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜನಾರ್ಧನ್‌ ಅಧ್ಯಕ್ಷತೆಯಲ್ಲಿ ಸಂಪನ್ನ ಸಭೆ ನಡೆಯಿತು. ಶೈಕ್ಷಣಿಕ ಸಾಧಕ ಧನರಾಜ್‌ ತಿಂಗಳಾಯ, ವೈಧ್ಯಕ್ಷೀಯ ಕ್ಷೇತ್ರದ ಸಾಧಕಿ ಡಾ. ಅರ್ಪಿತಾ ಶೆಟ್ಟಿ, ಕಲಾ ಸಾಧಕಿ ಕೌಶಲ್ಯ ಆರ್ಟ್‌ ಸಂಸ್ಥಾಪಕಿ ಹೆಬ್ರಿ ವೃಂದಾ ನಾಯಕ್‌,ಅವರಿಗೆ ಹೆಬ್ರಿ ಗಣೇಶೋತ್ಸವ ಗೌರವ ಪ್ರಧಾನ ಮಾಡಲಾಯಿತು.

ಹೆಬ್ರಿ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರೀಯ ಸದಸ್ಯರಾಗಿದ್ದ ಶೇಖರ ನಾಯ್ಕ್‌ ಸ್ಮರಣಾರ್ಥ ಜಯಂತಿ ನಾಯ್ಕ್‌, ಹಿರಿಯ ಸದಸ್ಯ ಉಮೇಶ ನಾಯಕ್‌ ಮತ್ತು ಕಲಾವಿದ ಮೂರ್ತಿರಚನಕಾರಾದ ವಸಂತ್‌ ದೇವಾಡಿಗ ಹೆಬ್ರಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಸಂಜೆ ಮಹಾಪೂಜೆ ನಡೆದು ಬೆಳ್ಳಿಯ ಪ್ರಭಾವಳಿ, ಸ್ವರ್ಣಲೇಪಿತ ಕಿರೀಟದೊಂದಿಗೆ ಶ್ರೀ ಗಣಪತಿ ದೇವರ ಭವ್ಯ ಪುರಮೆರವಣಿಗೆ, ವೈಭವದ ಶೋಭಾಯಾತ್ರೆ, ವಿವಿಧ ಕಲಾ ಪ್ರಕಾರಗಳ ಆಕರ್ಷಕ ಟ್ಯಾಬ್ಲೋ, ನೃತ್ಯದೊಂದಿಗೆ ನಡೆಯಿತು.

ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗುಂಡೂ ನಾಯಕ್‌, ಭಾಸ್ಕರ ಜೋಯಿಸ್‌, ಯೋಗೀಶ್‌ ಭಟ್‌, ಪ್ರವೀಣ್‌ ಬಲ್ಲಾಳ್‌, ಕಾರ್ಯಾಧ್ಯಕ್ಷ ಮುದ್ದು ಪೂಜಾರಿ, ಪ್ರಧಾನ ಕಾರ್ಯದರ್ಶಿ ಎಚ್. ರಾಜೇಶ ಆಚಾರ್ಯ, ‌ಉಪಾಧ್ಯಕ್ಷರಾದ ಪ್ರಕಾಶ ಮಲ್ಯ, ದಿವಾಕರ ಶೆಟ್ಟಿ ಸೀತಾನದಿ, ಎಚ್.ಕೆ.ಸುಧಾಕರ್‌, ಗಣೇಶ ನಾಯಕ್‌, ಶಂಕರ ಶೇರಿಗಾರ್‌, ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ಲೆಕ್ಕ ಪರಿಶೋಧಕ ಟಿ.ಜಿ.ಆಚಾರ್ಯ, ಜತೆ ಕಾರ್ಯದರ್ಶಿ ಉಮೇಶ ನಾಯಕ್‌, ನರೇಶ್‌ ಭಂಡಾರಿ, ವಿವಿಧ ಸಮಿತಿಯ ಸಂಚಾಲಕರಾದ ನಾಗರಾಜ ಜೋಯಿಸ್‌, ವಿಜೇಂದ್ರ ಶೆಟ್ಟಿ, ಪ್ರಕಾಶ ಶೆಟ್ಟಿ ಕಲ್ಲಿಲ್ಲು, ಕರುಣಾಕರ ದೇವಾಡಿಗ, ಸುದೀಪ ಭಟ್‌, ಸಂತೋಷ ನಾಯಕ್‌, ಅರುಣ್‌ ಕುಮಾರ್‌ ಹೆಗ್ಡೆ, ವಸಂತ ಶೆಟ್ಟಿ, ವಿಜಯ ಹೆಗ್ಡೆ, ಸುಕುಮಾರ್‌ ಮುನಿಯಾಲ್‌, ಸುಂದರ ಪೂಜಾರಿ, ಮಹಿಳಾ ಸಂಚಾಲಕಿ ಭಾನು ಪಿ ಬಲ್ಲಾಳ್‌, ಮಹಿಳಾ ಕಾರ್ಯದರ್ಶಿ ವಿದ್ಯಾ ಮಲ್ಯ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪ್ರಸಾದ್‌ ಶೆಟ್ಟಿ ನಿರೂಪಿಸಿ ಮುದ್ದು ಪೂಜಾರಿ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!