Wednesday, September 23, 2026
Homeಹೆಬ್ರಿಹೆಬ್ರಿ ಶ್ರೀ ವಿಶ್ವಕರ್ಮ ಸಂಘದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ : ವಾರ್ಷಿಕ ಮಹಾಸಭೆ.

ಹೆಬ್ರಿ ಶ್ರೀ ವಿಶ್ವಕರ್ಮ ಸಂಘದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ : ವಾರ್ಷಿಕ ಮಹಾಸಭೆ.

ವಿಶ್ವಕರ್ಮ ಜಯಂತಿಗೆ ಸರ್ಕಾರಿ ರಜೆ ನೀಡಿದರೆ ಮತ್ತಷ್ಟು ಮಹತ್ವ : ಗೋಪಾಲ ಆಚಾರ್ಯ.

ಹೆಬ್ರಿ : ವಿಶ್ವಕರ್ಮರ ಮುಖಂಡರಾಗಿದ್ದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಮುಂದಾಳತ್ವದಲ್ಲಿ ಅಂದು ಸರ್ಕಾರ ಸರ್ಕಾರದ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಘೋಷಣೆ ಮಾಡಿ ಈಗ ಮಹೋತ್ಸವ ನಡೆಯುತ್ತಿದೆ. ಮುಂದೆ ವಿಶ್ವಕರ್ಮ ಮಹೋತ್ಸವಕ್ಕೆ ಸರ್ಕಾರಿ ರಜೆ ನೀಡಿದರೆ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ, ಸರ್ಕಾರ ಮನಸ್ಸು ಮಾಡುವಂತಾಗಲಿ ಎಂದು ಹೆಬ್ರಿ ಎಸ್.ಆರ್‌ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ ಗೋಪಾಲ ಆಚಾರ್ಯ ಹೇಳಿದರು.

ಅವರು ಗುರುವಾರ ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಯುವ ವೃಂದದ ಸಹಕಾರದಲ್ಲಿ ಸಂಘದ ಸಮುದಾಯ ಭವನದಲ್ಲಿ ನಡೆದ ೪೩ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ನಮ್ಮ ಯುವ ಜನತೆ ದಾರಿ ತಪ್ಪಬಾರದು, ಸನ್ನಢತೆಯಲ್ಲಿ ಮುನ್ನಡೆದು ನಮ್ಮಲ್ಲಿರುವ ಬೆಳೆಸಿ ಸಮಾಜದಲ್ಲಿ ಸಾಧಕರಾಗಬೇಕು, ಕುಲ ಕಸುಬಿನ ಜೊತೆಗೆ ಇತರ ಉದ್ಯೋಗಗಳ ಮೂಲಕ ಮುಖ್ಯವಾಹಿನಿಯಲ್ಲಿರಬೇಕು ಎಂದು ಗೋಪಾಲ ಆಚಾರ್ಯ ಆಶಯ ವ್ಯಕ್ತಪಡಿಸಿದರು.

ಸಮಾಜದ ಮುಖಂಡರಾದ ಹೆಬ್ರಿ ಟಿ.ಜಿ.ಆಚಾರ್ಯ ಮಾತನಾಡಿ ನಮ್ಮ ಸಂಘದ ಸುವರ್ಣ ಸಂಭ್ರಮ ಮತ್ತು ಕನಸಿನ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಸರ್ತೋಮುಖ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು. ಹಿರಿಯರಾದ ಸೀತಾನದಿ ರುದ್ರಯ್ಯ ಆಚಾರ್ಯ ವನಜಾ ಆಚಾರ್ಯ ದಂಪತಿಯನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧಕರಾದ ಶಿವಪುರ ಯಳಗೋಳಿ ಪ್ರಾರ್ಥನಾ ಆಚಾರ್ಯ, ಶಿವಪುರ ಹಾಳೇಬೆಟ್ಟು ಶ್ರಾವ್ಯ ಆಚಾರ್ಯ, ನಮಿತ್ ಆಚಾರ್‌ ಅವರನ್ನು  ಸನ್ಮಾನಿಸಲಾಯಿತು.

ರತ್ನಾಕರ ಆಚಾರ್ಯ ಶಿವಪುರ, ಭುವನೇಂದ್ರ ಆಚಾರ್ಯ, ನರಸಿಂಹ ಆಚಾರ್ಯ, ಭಾಸ್ಕರ ಆಚಾರ್ಯ ಸೀತಾನದಿ, ರವಿ ಆಚಾರ್ಯ ಚಾರ, ಜಯರಾಮ ಆಚಾರ್ಯ, ಸದಾಶಿವ ಆಚಾರ್ಯ ಅವರನ್ನು ವಿಶೇಷ ಸೇವೆಗಾಗಿ ಗೌರವಿಸಲಾಯಿತು.

ರವೀಂದ್ರ ಪುರೋಹಿತ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡರು. ಕಾರ್ಯದರ್ಶಿಗಳಾದ ಹೆಚ್.ಎಂ.ಶಶಿಶಂಕರ್‌, ಸುರೇಂದ್ರ ಆಚಾರ್ಯ, ಉಪಾಧ್ಯಕ್ಷ ಸದಾಶಿವಾ ಆಚಾರ್ಯ ರಾಗಿಹಕ್ಲು, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಾ ಎಂ, ಯುವ ವೃಂದದ ಅಧ್ಯಕ್ಷ ಅರವಿಂದ ಆಚಾರ್ಯ, ಉಪಾಧ್ಯಕ್ಷ ಪ್ರಸನ್ನ ಆಚಾರ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಶಶಿಶಂಕರ್‌ ವರದಿ ಮಂಡಿಸಿ ನಿರೂಪಿಸಿ ಸ್ವಾಗತಿಸಿದರು. ಪ್ರಶಾಂತ್‌ ಆಚಾರ್ಯ ಮಠದಬೆಟ್ಟು ಮತ್ತು ಭಾಸ್ಕರ ಆಚಾರ್ಯ ಸೀತಾನದಿ ಪರಿಚಯಿಸಿದರು. ರತ್ನಾಕರ ಆಚಾರ್ಯ ಶಿವಪುರ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!