ಬೆಳ್ತಂಗಡಿ : ಕರ್ನಾಟಕ ಸಾವಯವ ಕೃಷಿ ಯೋಜನೆ, ಮಂಗಳ ಸಮೃದ್ಧಿ ವಿಭಾಗದ ವತಿಯಿಂದ ನೀಡುವ
ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿಗೆ ಕೃಷಿಕರಾದ ಕಡ್ತಲ ಜಯ ಹೆಗ್ಡೆ, ಮುನಿಯಾಲು ಪಾಲ್ಜಡ್ಡು ಸುರೇಶ್ ನಾಯ್ಕ್ ಮತ್ತು ಕಾಡುಹೊಳೆ ರಾಜು ಸಿ ನಾಯಕ್ ಆಯ್ಕೆಯಾಗಿದ್ದಾರೆ.
ಹೆಬ್ರಿ ತಾಲ್ಲುಕು ನೋಡಲ್ ಅಧಿಕಾರಿ ಶಶಿಕಲಾ ಡಿ ಪೂಜಾರಿ ಇವರ ಶಿಫಾರಸು ಮೇರೆಗೆ ಈ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮಾಣಿಲ ಸ್ವಾಮೀಜಿ, ಸಚಿವ ಯು. ಟಿ .ಖಾದರ್, ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಕುಮಾರ್ ಗೌಡ ಪ್ರಶಸ್ತಿ ಪ್ರದಾನ ಮಾಡುವರು.




