Saturday, September 26, 2026
Homeಹೆಬ್ರಿಹೆಬ್ರಿ ಗಿಲ್ಲಾಳಿಯಲ್ಲಿ 1004ನೇ ವಾತ್ಸಲ್ಯ ಮನೆ ಹಸ್ತಾಂತರ.

ಹೆಬ್ರಿ ಗಿಲ್ಲಾಳಿಯಲ್ಲಿ 1004ನೇ ವಾತ್ಸಲ್ಯ ಮನೆ ಹಸ್ತಾಂತರ.

ಸೇವೆಗೆ ಇನ್ನೊಂದು ಹೆಸರು ಶ್ರೀಕ್ಷೇತ್ರ ಧರ್ಮಸ್ಥಳ : ಮನೋಜ್ ಕುಮಾರ್ ಶೆಟ್ಟಿ.

ಹೆಬ್ರಿ : ಸೇವೆಗೆ ಇನ್ನೊಂದು ಹೆಸರು ಶ್ರೀಕ್ಷೇತ್ರ ಧರ್ಮಸ್ಥಳ. ಸರ್ಕಾರ ಏನು ಮಾಡಬೇಕು ಅದನ್ನು ಜ್ಞಾನವಿಕಾಸ ಯೋಜನೆ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಮಾಡಿದೆ. ಮಕ್ಕಳು ದುಷ್ಟಕ್ಕೆ ಬಲಿಯಾಗಬಾರದೆಂದು ಸ್ವಾಸ್ಥ ಸಂಕಲ್ಪದ ಮೂಲಕ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಕುಟುಂಬದಲ್ಲಿ ಒಬ್ಬ ಮಹಿಳೆಯನ್ನು ಸ್ವಾಭಿಮಾನಿಯಾಗಿಸಿದರೆ ಸಮಾಜ ಉದ್ಧಾರವಾಗುತ್ತದೆ ಎಂದು ಯೋಜನೆಯನ್ನು ವೀರೇಂದ್ರ ಹೆಗ್ಗಡೆಯವರು ಮಾಡಿರುವುದು ಶ್ರೇಷ್ಠ ಕೆಲಸ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನ ಜಾಗೃತಿ ಸದಸ್ಯ ಮನೋಜ್ ಕುಮಾರ್ ಶೆಟ್ಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲ್ಲೂಕು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ವಾತ್ಸಲ್ಯ ಕಾರ್ಯಕ್ರಮದಲ್ಲಿ ಹೆಬ್ರಿ ವಲಯದ ಗಿಲ್ಲಾಳಿ ವಾರಿಜ ರಾಮಕೃಷ್ಣ ನಾಯಕ್ ಅವರಿಗೆ 1004 ನೇ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಜಾಗೃತಿ ಸಮಿತಿ ಸದಸ್ಯರಾದ ನರೇಂದ್ರ ನಾಯಕ್, ಬೇಳಂಜೆ ಹರೀಶ್ ಪೂಜಾರಿ, ಹೆಚ್ ಜನಾರ್ಧನ್, ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಸುರೇಶ ಭಂಡಾರಿ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರವೀಣ್ ಹೆಗ್ಡೆ, ಪ್ರಮುಖರಾದ ಹೆಬ್ರಿ ಟಿ.ಜಿ ಆಚಾರ್ಯ, ಐತು ಕುಲಾಲ್, ಹೆಚ್.ಕೆ ಸುಧಾಕರ್, ಸಂತೋಷ್ ನಾಯಕ್ ಕನ್ಯಾನ, ಜ್ಯೋತಿ, ಶಾಲಿನಿ ಭಂಡಾರಿ, ಯೋಜನಾಧಿಕಾರಿ ರೇಷ್ಮಾ, ಸೇವಾ ಪ್ರತಿನಿಧಿ ಕಾಂತಿ ಹೆಗ್ಡೆ, ನಾಗರತ್ನ ಇದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ ಸ್ವಾಗತಿಸಿದರು. ಮೇಲ್ವಿಚಾರಕ ಹೆಚ್ ಉದಯ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!