ಅಂತಿಮ ದರ್ಶನ ಪಡೆದ ಡಾ.ಎಂ.ವೀರಪ್ಪ ಮೊಯಿಲಿ.
ನೂರಾರು ಮಂದಿ ಅಂತಿಮ ದರ್ಶನ – ಕುಟುಂಬಕ್ಕೆ ಸಾಂತ್ವನ
ಕುಕ್ಕುಜೆ ದೊಂಡೆರಂಗಡಿ (ಹೆಬ್ರಿ ) : ಹಿರಿಯ ಸಹಕಾರಿ ದುರೀಣ ಸಮಾಜಸೇವಕರಾದ ಕಾಂಗ್ರೆಸ್ ಮುಖಂಡ ಕುಕ್ಕುಜೆ ಇಸಾರ್‌ಮಾರ್‌ಬೋಜ ಪೂಜಾರಿ (೭೮) ಅವರು ಶುಕ್ರವಾರ ಸಂಜೆ ನಿಧನರಾಗಿದ್ದು ಶನಿವಾರ ಸ್ವಗೃಹ ಕುಕ್ಕುಜೆ ಇಸಾರ್ ಮಾರ್ ನಲ್ಲಿ ನೂರಾರು ಮಂದಿ ಅಂತಿಮ ದರ್ಶನ ಪಡೆದರು.

ಹಿರಿಯ ಕಾಂಗ್ರೆಸ್ ಮುಖಂಡರಾಗಿ ಕಾರ್ಕಳ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ, ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ, ಕಾರ್ಕಳ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ, ಕಡ್ತಲ ಗ್ರಾಮ ಪಂಚಾಯತಿ ಸದಸ್ಯರಾಗಿ, ಕುಕ್ಕುಜೆ ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಭೋಜ ಪೂಜಾರಿಯವರು ಸೇವೆಸಲ್ಲಿಸಿದ್ದರು. ಕೃಷಿಕರಾಗಿ, ಸಮಾಜಸೇವಕರಾಗಿ ಸಕ್ರೀಯರಾಗಿದ್ದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವರಾದ ಭೋಜ ಪೂಜಾರಿ ಆಪ್ತ ಡಾ.ಎಂ.ವೀರಪ್ಪ ಮೊಯಿಲಿಯವರು ಅಂತಿಮ ದರ್ಶನ ಪಡೆದು ಭೋಜ ಪೂಜಾರಿಯವರ ಪತ್ನಿ ಮಕ್ಕಳಿಗೆ ಸಾಂತ್ವಾನ ಹೇಳಿದರು. ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅದ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ವಿವಿಧ ಮುಖಂಡರಾದ ಶುಭದ್ ರಾವ್ ಕಾರ್ಕಳ, ಬಿಪಿನ್ ಚಂದ್ರಪಾಲ್ ನಕ್ರೆ, ಸುಧಾಕರ ಕೋಟ್ಯಾನ್, ಅಜಿತ್ ಹೆಗ್ಡೆ ಮಾಳ, ಮುನಿಯಾಲು ಗೋಪಿನಾಥ ಭಟ್, ಸೇರಿದಂತೆ ಗ್ರಾಮಸ್ಥರು, ಸಹಕಾರಿ ಕ್ಷೇತ್ರದ ನಾಯಕರು, ಗಣ್ಯರು, ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.







