Sunday, November 8, 2026
Homeಕುಚ್ಚೂರು ಗ್ರಾಮ ಪಂಚಾಯತ್‌ಕುಚ್ಚೂರು : ಬೇಲಿ ಹಾಕಿ ರಸ್ತೆ ತಡೆ : ಆಕ್ರೋಶಗೊಂಡು ಬೇಲಿ ತೆರವುಗೊಳಿಸಿದ ಗ್ರಾಮಸ್ಥರು.

ಕುಚ್ಚೂರು : ಬೇಲಿ ಹಾಕಿ ರಸ್ತೆ ತಡೆ : ಆಕ್ರೋಶಗೊಂಡು ಬೇಲಿ ತೆರವುಗೊಳಿಸಿದ ಗ್ರಾಮಸ್ಥರು.

ವೈಯಕ್ತಿಕ ದ್ವೇಷದಿಂದ ರಸ್ತೆಗೆ ಬೇಲಿ !

ರಸ್ತೆ ಬಂದ್‌ : ಅನಾರೋಗ್ಯದ ಮಹಿಳೆಗೆ ಆಸ್ಪತ್ರೆಗೆ ಹೋಗಲು ಸಮಸ್ಯೆ.

ಕಾನೂನು ಭಾಹಿರ ಕೃತ್ಯ : ನ್ಯಾಯಲಯದ ಗಮನಕ್ಕೆ ತರುತ್ತೇವೆ : ವಕೀಲ ರತನ್‌ ಕುಮಾರ್‌

 

ಕುಚ್ಚೂರು : ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಿರುವ ರಘುರಾಮ ಶೆಟ್ಟಿ ಎಂಬವರು ಹಲವು ವರ್ಷಗಳಿಂದ ಇದ್ದ ರಸ್ತೆಯನ್ನು ವೈಯಕ್ತಿಕ ದ್ವೇಷದಿಂದ ತಡರಾತ್ರಿ ಏಕಾಏಕಿ ರಸ್ತೆಯನ್ನು ತಂತಿ ಬೇಲಿ ಹಾಕಿ, ರಸ್ತೆಯಲ್ಲಿ ಗುಂಡಿಯನ್ನು ನಿರ್ಮಿಸಿ ಸಂಚಾರ ಬಂದು ಮಾಡಿದ್ದರಿಂದ ಮನೆಗಳಿಗೆ ಸಂಚಾರಕ್ಕೆ ತೊಡಕು ಉಂಟು ಮಾಡಿದ್ದು ಶನಿವಾರ ಗ್ರಾಮಸ್ಥರು ಸೇರಿ ರಸ್ತೆಯ ಬೇಲಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಸ ಮಾಡಿಕೊಟ್ಟರು.

ಅನಾರೋಗ್ಯ ಪೀಡಿತೆ ಗಿರಿಜಾ ಶೆಟ್ಟಿ ಅವರಿಗೆ  ನಡೆಯಲು ಸಾಧ್ಯವಿಲ್ಲ, ನಿರಂತರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಶುಕ್ರವಾರ ರಾತ್ರಿ  ಅವರಿಗೆ ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನೋಡಿದಾಗ ರಸ್ತೆಯನ್ನು ಎರಡು ಕಡೆಯಲ್ಲಿ ಸಂಪೂರ್ಣ ಬಂದು ಮಾಡಿದ್ದರು. ಆದ್ದರಿಂದ ಶನಿವಾರ ಗ್ರಾಮಸ್ಥರು ಸೇರಿ ಅನಾರೋಗ್ಯ ಪೀಡಿತ ಗಿರಿಜಾ ಶೆಟ್ಟಿ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು  ರಸ್ತೆಯನ್ನು ಬಿಟ್ಟುಕೊಡುವ ಬಗ್ಗೆ  ಕೇಳಿಕೊಂಡಾಗ, ರಘುರಾಮ ಶೆಟ್ಟಿ ಒಪ್ಪದೆ ತಕರಾರು ಮಾಡಿದ್ದು ಆಕ್ರೋಶಗೊಂಡಿದ್ದು ಸ್ಥಳದಲ್ಲಿ ಸೇರಿದ ಸ್ಥಳೀಯರು ಹಾಗೂ ಗ್ರಾಮಸ್ಥರು ಸೇರಿ ರಸ್ತೆಗೆ ಅಳವಡಿಸಿದ ತಂತಿ ಬೇಲಿಯನ್ನು ತೆರವು ಮಾಡಿ ರಸ್ತೆಯಲ್ಲಿ ತೋಡಿದ ಗುಂಡಿಯನ್ನು ಮುಚ್ಚಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.

ಅಂದು ರಾಜಿ ಪಂಚಾಯಿತಿಗೆ ಮೂಲಕ ಮನೆ ನಿರ್ಮಿಸಿದ್ದರು : ರಘುರಾಮ ಶೆಟ್ಟಿ ಅವರಿಗೆ ಅಂದು ಮನೆ ನಿರ್ಮಿಸಲು ಕೆಲವರು ಅಡ್ಡಿ ಉಂಟು ಮಾಡಿದಾಗ, ರಸ್ತೆಯ ತೆರವು ಸಮಯದಲ್ಲಿ ಸೇರಿದ ಗ್ರಾಮಸ್ಥರಲ್ಲಿ ಕೆಲವು ಪ್ರಮುಖರು ಸೇರಿ ಅಂದು ರಾಜಿ ಪಂಚಾಯಿತಿಗೆ ಮೂಲಕ ಅವರಿಗೆ ಮನೆ, ಬಾವಿಯನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದರು. ರಸ್ತೆಯನ್ನು ಯಾವುದೇ ಕಾರಣಕ್ಕೂ ತಡೆಯಬಾರದೆಂದು ಮಾತುಕತೆಯಲ್ಲಿ ತಿಳಿಸಿ ಮನವರಿಕೆ ಮಾಡಲಾಗಿತ್ತು. ಆದರೆ ರಘುರಾಮ ಶೆಟ್ಟಿಯವರು ಪಂಚಾಯಿತಿಗೆಯನ್ನು ಮುರಿದು ಶುಕ್ರವಾರ ರಾತ್ರಿ ರಸ್ತೆಯನ್ನು ತಡೆ ಮಾಡಿದ್ದು ಶನಿವಾರ ಅಂದು ಪಂಚಾಯತಿಗೆ ಮಾಡಿದ ಪ್ರಮುಖರು ಸೇರಿ ಗ್ರಾಮಸ್ಥರು ರಸ್ತೆಯನ್ನು ತೆರೆವು ಮಾಡಿದ್ದಾರೆ.

 

ಸ್ಥಳೀಯ ಮುಖಂಡರಾದ ಕಿರಣ ತೋಳಾರ್, ಅಶ್ವಿನಿ ತೋಳಾರ್, ನವೀನ್ ಕೆ ಅಡ್ಯಂತಾಯ, ರಘುರಾಮ ಕುಲಾಲ್, ದೇವಳಬೈಲು ಸುಧಾಕರ ಶೆಟ್ಟಿ, ಮಹೇಶ ಶೆಟ್ಟಿ ಬಾದ್ಲು, ಮಹೇಶ ಶೆಟ್ಟಿ ಕಾನ್ಬೆಟ್ಟು, ರೋಶನ್ ಕುಮಾರ್ ಶೆಟ್ಟಿ, ಸನತ್ ಶೆಟ್ಟಿ, ದಿನೇಶ ಶೆಟ್ಟಿ ಚಾರ, ಹೆಬ್ರಿ ಕಾರ್ಕಳದ ಖ್ಯಾತ ವಕೀಲ ಹೆಚ್. ರತನ್ ಕುಮಾರ್ ಸ್ಥಳದಲ್ಲಿದ್ದರು.

………..

ಕಾರ್ಕಳ ನ್ಯಾಯಲಯದಲ್ಲಿ ಪ್ರಕರಣ : ಕಾರ್ಕಳದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ ಎಂ ಎಫ್ ಸಿ ಕಾರ್ಕಳ ನ್ಯಾಯಾಲಯದಲ್ಲಿ ಅಸಾಲು ದಾವೆ ಸಂಖ್ಯೆ 92/24ರಲ್ಲಿ ಈಗಾಗಲೇ ದಾರಿ ಹಕ್ಕಿನ ಬಾಬ್ತು ಸಿವಿಲ್ ದಾವೆಯನ್ನು ಹೂಡಲಾಗಿದೆ. ಸದ್ರಿ ದಾವೆ ತನಿಖೆಯಲ್ಲಿ ಬಾಕಿ ಇರುವಾಗ ರಘುರಾಮ ಶೆಟ್ಟಿ ಎಂಬವರು ಏಕಾಏಕಿಯಾಗಿ ದಾರಿಗೆ ತಂತಿ ಬೇಲಿಯನ್ನು ಕಾನೂನುಬಾಹಿರವಾಗಿ ಅಳವಡಿಸಿದ್ದರಿಂದ, ಗಿರಿಜಾ ಶೆಟ್ಟಿ ಅವರಿಗೆ ತೀವೃ ಅನಾರೋಗ್ಯದ ಕಾರಣ ಅವರನ್ನು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು   ಆಂಬುಲೆನ್ಸ್ ಬಂದಾಗ, ರಸ್ತೆಗೆ ತಡೆ ಮಾಡಿರುವುದನ್ನು ಗಮನಿಸಿದ ಗ್ರಾಮಸ್ಥರು ರಸ್ತೆಯನ್ನು ತೆರವು ಮಾಡಿದ್ದಾರೆ. ಈ ಕಾನೂನು ಬಾಹಿರ ಚಟುವಟಿಕೆಯನ್ನು ಮಾನ್ಯ ನ್ಯಾಯಾಲಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುತ್ತೇವೆ.

– ಹೆಚ್. ರತನ್ ಕುಮಾರ್. ವಕೀಲರು ಕಾರ್ಕಳ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!