Thursday, September 24, 2026
Homeಹೆಬ್ರಿಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಪಿಕಪ್- ಅಪಾಯ ಅರಿತು ಜಿಗಿದ ಚಾಲಕ; ಪ್ರಾಣಾಪಾಯದಿಂದ...

ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಪಿಕಪ್- ಅಪಾಯ ಅರಿತು ಜಿಗಿದ ಚಾಲಕ; ಪ್ರಾಣಾಪಾಯದಿಂದ ಪಾರು

ಹೆಬ್ರಿ : ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ತರಕಾರಿ ಸಾಗಿಸುತ್ತಿದ್ದ ಪಿಕಪ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಶನಿವಾರ ಸಂಜೆ ನಡೆದಿದೆ.

ಚಿಕ್ಕಮಗಳೂರಿನಿಂದ ತರಕಾರಿ ತುಂಬಿಕೊಂಡು ಮಂಗಳೂರಿನತ್ತ ತೆರಳುತ್ತಿದ್ದ ಪಿಕಪ್‌ ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕಂದಕಕ್ಕೆ ಉರುಳಿದೆ. ಅಪಾಯವನ್ನು ಅರಿತ ಚಾಲಕ ತಕ್ಷಣ ವಾಹನದಿಂದ ಜಿಗಿದ ಪರಿಣಾಮ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ಸಂಜೆ ಕ್ರೇನ್‌ ಮೂಲಕ ಕಂದಕಕ್ಕೆ ಉರುಳಿದ್ದ ಪಿಕಪ್‌ ವಾಹನವನ್ನು ಮೇಲಕ್ಕೆತ್ತಲಾಯಿತು. ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!