ಹೆಬ್ರಿ : ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಶುಕ್ರವಾರ ಅನಂತ ಚತುರ್ಧಶಿಯ ಪರ್ವ ಕಾಲದಲ್ಲಿ ಶ್ರೀಅನಂತ ಪದ್ಮನಾಭ ಸ್ವಾಮಿಗೆ ಪಂಚಾಮೃತಾಭಿಷೇಕ, ಪವಮಾನ ಕಲಶಾಭಿಷೇಕ, ಪುರಸ್ಸರ ಮಹಾಪೂಜೆ, 14 ವಿವಿಧ ಬಗೆಯ ವಿಶೇಷ ಭಕ್ಷ್ಯ ಸೇವೆಯನ್ನು ಪ್ರದಕ್ಷಿಣಾ ಪೂರ್ವಕ ಸಮರ್ಪಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಕ್ಷೇತ್ರದ ಅನುವಂಶಿಕ ಮೋಕ್ತೇಸರ ಎಚ್. ತಾರಾನಾಥ ಬಲ್ಲಾಳ್, ಅರ್ಚಕ ಮೋಹನರಾಜ್ ಜೋಯಿಸ್, ಗಣ್ಯರು ಸೇರಿದಂತೆ ನೂರಾರು ಭಕ್ತ ಸಮೂಹ ಭಾಗವಹಿಸಿದ್ದರು.



