Saturday, September 26, 2026
Homeಹೆಬ್ರಿಹೆಬ್ರಿಯಲ್ಲಿ ಉಚಿತ ಮಧುಮೇಹ ಹಾಗೂ ಯಕೃತ್ ತಪಾಸಣಾ ಶಿಬಿರ.

ಹೆಬ್ರಿಯಲ್ಲಿ ಉಚಿತ ಮಧುಮೇಹ ಹಾಗೂ ಯಕೃತ್ ತಪಾಸಣಾ ಶಿಬಿರ.

ಹೆಬ್ರಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹೆಬ್ರಿ ತಾಲ್ಲೂಕು ಶಾಖೆ, ಆರೋಗ್ಯ ಭಾರತಿ ಹೆಬ್ರಿ ತಾಲ್ಲೂಕು, ಮತ್ತು ಹೆಬ್ರಿ ಶ್ರೀ ಅನಂತ ಪದ್ಮನಾಭ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಆಶ್ರಯದಲ್ಲಿ, ಡಾ. ರವಿಪ್ರಸಾದ್ ಹೆಗ್ಡೆ ಮತ್ತು ಡಾ.ಸುಷ್ಮಾ ಆರ್ ಹೆಗ್ಡೆ ಅವರ ನೇತೃತ್ವದಲ್ಲಿ ಶ್ರೀ ಸಿದ್ಧಿ ಆಯುರ್ವೇದ ಚಿಕಿತ್ಸಾಲಯದಲ್ಲಿ ” ಉಚಿತ ಮಧುಮೇಹ ಹಾಗೂ ಯಕೃತ್ ತಪಾಸಣಾ ಶಿಬಿರ ” ಶುಕ್ರವಾರ ನಡೆಯಿತು.

ಹೆಬ್ರಿ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ವೀಣಾ ಆರ್ ಭಟ್, ಉಪಸಭಾಪತಿ ಡಾ. ವಿದ್ಯಾಧರ ಹೆಗ್ಡೆ ಎಸ್, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಪ್ರಕಾಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಡಾ. ಭಾರ್ಗವಿ ಐತಾಳ್, ಡಾ. ಸುಷ್ಮಾ ಆರ್ ಹೆಗ್ಡೆ, ರಕ್ತದಾನ ಶಿಬಿರ ಸಮಿತಿಯ ಸಂಚಾಲಕರಾದ ಡಾ. ರವಿಪ್ರಸಾದ್ ಹೆಗ್ಡೆ, ಆರೋಗ್ಯ ಹಾಗೂ ಪರಿಸರ ಸಮಿತಿಯ ಸಂಚಾಲಕರಾದ ಇಂದಿರಾ ಬಾಯಾರಿ ಉಪಸ್ಥಿತರಿದ್ದರು.
ಸುಮಾರು 30 ಜನರ ಮಧುಮೇಹ ತಪಾಸಣೆ ಹಾಗೂ 23 ಜನರ ಯಕೃತ್ತ್ ಕಾರ್ಯ ತಪಾಸಣೆ ನಡೆಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!